ಮೈಸೂರು: ಮದುವೆ ಆಗಿ ಒಂದು ಮಗು ಇದ್ದ ಮಹಿಳೆ ಮತ್ತೊಬ್ಬ ಯುವಕನ ಪ್ರೇಮದ ಮೋಹಕ್ಕೆ ಬಿದ್ದು ತಾನು ಜನ್ಮ ಕೊಟ್ಟ ಮಗುವನ್ನೆ ಅನಾಥ ಮಗುವಾಗಿ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿರೋ ವಿಚಿತ್ರ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಇತ್ತೀಚೆಗೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ಯುವಕನೊಬ್ಬ ಮಗು ಎತ್ತಿಕೊಂಡು ಬಂದಿದ್ದ. ತಾನು ರಾಯಚೂರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಅಪರಿಚಿತ ಮಹಿಳೆ ತನ್ನ ಮಗುವನ್ನು ತನ್ನ ಕೈಯಲ್ಲಿ ಇಟ್ಟು 10 ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಪರಾರಿಯಾದಳು ಎಂದು ಹೇಳಿ ಮಗುವನ್ನು ನೀವೇ ರಕ್ಷಿಸಿ ಎಂದು ಪೊಲೀಸರಿಗೆ ಒಪ್ಪಿಸಿ ಹೋಗಿದ್ದ. ಈ ಪ್ರಕರಣದ ಅಸಲಿಯತ್ತನ್ನು ಮೈಸೂರು ಪೊಲೀಸರು ಈಗ ಬೇಧಿಸಿದ್ದಾರೆ. ಇದು ವಿವಾಹಿತ ಮಹಿಳೆ ಹಾಗೂ ಆಕೆಯ ಜೊತೆ ಸಂಬಂಧ ಹೊಂದಿದ್ದ ಯುವಕ ಎಣೆದ ನಾಟಕದ ಎಂಬುದು ಗೊತ್ತಾಗಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಯುವಕ ರಘು ಗಂಡು ಮಗು ಸಮೇತ ಠಾಣೆಗೆ ಬಂದು ಕಥೆ ಎಣೆದಿದ್ದ. ಅಸಲಿಯತ್ತು ಏನೆಂದರೆ ರಘು, ರಾಯಚೂರು ಮೂಲದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಅವಳನ್ನೆ ಮದುವೆ ಆಗಲು ನಿರ್ಧರಿಸಿದ್ದ. ಈ ಸಂಬಂಧಕ್ಕೆ ಆ ಮಹಿಳೆಯ ಮಗು ಅಡ್ಡಿಯಾಗಿತ್ತು. ಹೇಗಾದರೂ ಮಾಡಿ ಮಗುವನ್ನು ಹೊರಗೆ ಹಾಕಬೇಕೆಂದು ಇಬ್ಬರು ಸೇರಿ ಈ ಪ್ಲಾನ್ ಮಾಡಿದ್ದರು. ಇದನ್ನೂ ಓದಿ: ತಾಳಿ ಕಟ್ಟುವಾಗ ಕುಸಿದುಬಿದ್ದಂತೆ ವಧು ನಾಟಕ – ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ
ರಘು ಇನ್‍ಸ್ಟಾಗ್ರಾಂ ನಲ್ಲಿ ಈ ವಿವಾಹಿತ ಮಹಿಳೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಆ ಮಹಿಳೆಯ ಪತಿಗೂ ಗೊತ್ತಾಗಿ ಜಗಳವಾಗಿತ್ತು. ಆಗ ಆ ಮಹಿಳೆ ಪತಿಯನ್ನು ಬಿಟ್ಟು ಯುವಕನ ಜೊತೆ ಸಂಸಾರ ಮಾಡಲು ಮುಂದಾಗಿದ್ದಳು. ಆದರೆ, ಸಂಸಾರಕ್ಕೆ ಮಗು ಅಡ್ಡಿಯಾಗಿತ್ತು. ಹೀಗಾಗಿ, ಈ ರೀತಿಯ ಕಥೆ ಹೇಳಿ ಮಗುವನ್ನು ಸರಕಾರದ ಪುನರ್ ವಸತಿ ಕೇಂದ್ರಕ್ಕೆ ಸೇರಿಸಲು ಪ್ಲಾನ್ ಮಾಡಿ ಈ ಕಥೆ ಹೆಣೆದಿದ್ದರು.
ಪ್ರಕರಣದ ಅಸಲಿಯತ್ತನ್ನು ಬೇಧಿಸಿದ ಪೊಲೀಸರು ಈ ಇಬ್ಬರನ್ನು ವಶಕ್ಕೆ ಪಡೆದು ಮಗುವನ್ನು ರಕ್ಷಿಸಿದ್ದಾರೆ. ಪ್ರೀತಿಸಿದ ಯುವಕ, ತಮ್ಮ ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಗೆ ಅಡ್ಡಿಯಾದ ಮಗುವನ್ನ ಅನಾಥ ಎಂದು ಬಿಂಬಿಸಲು ಯತ್ನಿಸಿದ ಕಳ್ಳ ಪ್ರೇಮಿಗಳು ಲಷ್ಕರ್ ಠಾಣಾ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ.ಪ್ರೇಮಿಗಳನ್ನ ವಶಕ್ಕೆ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದು ಮಗುವನ್ನು ಬಾಪುಜಿ ಚಿಲ್ಡ್ರನ್ ಕೇರ್ ಸೆಂಟರ್ ಗೆ ಸೇರಿಸಿದ್ದಾರೆ.