ಬಳ್ಳಾರಿ: ಇನ್ಸ್ಟಾಗ್ರಾಂ (Instagram) ಲವ್, ಸೆಕ್ಸ್ ದೋಖಾ, ಕೊನೆಗೆ ಮೋಸದ ಆರೋಪ ಹೊರಿಸಿ ಡೆತ್‌ನೋಟ್ (Death Note) ಬರೆದಿಟ್ಟು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ತುಂಗಭದ್ರಾ ಸೇತುವೆ (Tunga Bhadra Bridge) ಬಳಿ ನಡೆದಿದೆ.
ಪ್ರಿಯಕರನ ಮೋಸಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್ ಬರೆದು ಮಹಿಳೆ ತುಂಗಭದ್ರಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇತುವೆಯಿಂದ ಜಿಗಿಯುತ್ತಿರುವುದನ್ನ ಬೈಕ್ ಸವಾರರು ನೋಡಿದ್ದಾರೆ. ಮಹಿಳೆ ನದಿಗೆ ಜಿಗಿದಿದ್ದನ್ನ ಯುವಕರು ನೋಡಿ ಮದಲಗಟ್ಟಿ ಗ್ರಾಮಸ್ಥರಿಗೆ ತಿಳಿಸಿದ್ದರು. ಅಕ್ಕಪಕ್ಕದಲ್ಲಿದ್ದ ಮೀನುಗಾರರು ಮಹಿಳೆಯನ್ನು ರಕ್ಷಿಸಿಲು ಪ್ರಯತ್ನಿಸಿದ್ದಾರೆ. ಆದರೆ ನೀರಿನ ರಭಸಕ್ಕೆ ಮಹಿಳೆ ಕೊಚ್ಚಿ ಹೋಗಿದ್ದಾರೆ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ 50,000 ಕ್ಯೂಸೆಕ್ ನೀರು ಬಿಡುಗಡೆ
ಕೆ.ಅಯ್ಯನಹಳ್ಳಿ ಗ್ರಾಮದ ವಿವಾಹಿತೆ ಮಹಿಳೆಯೊಬ್ಬರು ತನ್ನ ಸಾವಿನ ಕುರಿತು ಪತ್ರ ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ನನ್ನ ಪ್ರಿಯತಮನೇ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನನ್ನ ಸಾವಿಗೆ ಸುಗೂರು ಶಿವಮೂರ್ತಿನೇ ಕಾರಣ, ಈತನಿಗೆ ಮರಣದಂಡನೆ ಶಿಕ್ಷೆ ಆಗಬೇಕು. ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ನನ್ನ ಪ್ರೀತಿ ಮಾಡುತ್ತಾ ಸಾಕಷ್ಟು ಹುಡುಗಿಯರ ಜೊತೆ ಸುತ್ತಾಡಿ ಕೊನೆಗೆ ನನ್ನ ಬಿಟ್ಟಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಕಾಣೆಯಾದ ಮಹಿಳೆ ಮತ್ತು ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಪತ್ರ ಬರೆದಿಟ್ಟ ಮಹಿಳೆ ಒಬ್ಬರೇ ಎಂದು ಹೇಳಲಾಗುತ್ತಿದೆ. ಹೂವಿನಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ