ಮೈಸೂರು: ಉಪನಯನ ಕಾರ್ಯಕ್ರಮಕ್ಕೆ ಅತಿಥಿಗಳ ವೇಷದಲ್ಲಿ ಬಂದು ಕಳ್ಳತನಕ್ಕೆ ಮುಂದಾಗಿದ್ದ ಮಹಿಳೆಯನ್ನು ಲಕ್ಷ್ಮಿಪುರಂ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮಿಪುರಂ ನಗರದ ಹೊಯ್ಸಳ ಕರ್ನಾಟಕ ಸಭಾಭವನದಲ್ಲಿ ಉಪನಯನ ಕಾರ್ಯಕ್ರಮ ನಡೆಯುತ್ತಿತ್ತು. ಎಲ್ಲರು ಉಪನಯನದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಇಲ್ಲಿಗೆ ಅತಿಥಿ ರೂಪದಲ್ಲಿ ಜನರ ಮಧ್ಯೆ ಮಹಿಳೆಯೊಬ್ಬರು ಬಂದಿದ್ದರು.
ಇದೇ ಸಂದರ್ಭವನ್ನು ಉಪಯೊಗಿಸಿಕೊಂಡ ಮಹಿಳೆ ತಾನು ತಂದಿದ್ದ ಚೀಲಕ್ಕೆ ಬೆಳ್ಳಿಯ ವಸ್ತುಗಳನ್ನು ತುಂಬಿಕೊಳ್ಳಲು ತೊಡಗಿದ್ದರು. ಇದನ್ನು ಗಮನಿಸಿದ ಕುಟುಂಬದ ಸದಸ್ಯರು ಕಳ್ಳಿಯೆಂದು ಜೋರಾಗಿ ಕೂಗಿದ್ದಾರೆ. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಜನರು ರೆಡ್ ಹ್ಯಾಂಡಾಗಿ ಮಹಿಳೆಯನ್ನು ಹಿಡಿದುಕೊಂಡಿದ್ದಾರೆ.
ಮಹಿಳೆಯನ್ನು ಹಿಡಿದು ಕೇಳಿದಾಗ ಬೆಳ್ಳಿಯನ್ನು ಕದ್ದಿರುವ ಬಗ್ಗೆ ತನ್ನ ತಪ್ಪೊಪ್ಪಿಕೊಂಡಿದ್ದರು. ಇದನ್ನು ಗಮನಿಸಿದ ಮನೆಯವರು ಹೆಚ್ಚಿನ ವಿಚಾರಣೆಗಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಮೈಸೂರಿನ ಲಕ್ಷ್ಮಿಪುರಂನ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.
https://www.youtube.com/watch?v=NFCvDRpZNYQ