ಪಾಟ್ನಾ: 30 ವರ್ಷದ ಮಹಿಳೆಯ ಮೃತದೇಹ ಪೀಸ್ ಪೀಸ್ ಆಗಿದ್ದು, ಬೆಡ್ ಕೆಳಗೆ ಪತ್ತೆಯಾಗಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.
ಮಹಿಳೆಯನ್ನು ಬಬಿತಾ ಎಂದು ಗುರುತಿಸಲಾಗಿದೆ. ಬಬಿತಾ ಮನೆಯಿಂದ ಕೆಟ್ಟ ವಾಸನೆ ಬಂದ ನಂತರ ಮನೆ ಮಾಲೀಕ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಬಬಿತಾ ತನ್ನ ಪತಿ ರಾಜೇಶ್ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಮನೆಯ ಮಾಲೀಕ ದಿನೇಶ್ ಚಹಾ ಅಂಗಡಿ ಇಟ್ಟಿದ್ದು, ಸುಮಾರು ಒಂದೂವರೆ ತಿಂಗಳಿಂದ ಮನೆ ಮಾಲೀಕನ ಕ್ಯಾಬ್ ಚಾಲಕನಾಗಿ ರಾಜೇಶ್ ಕೆಲಸ ಮಾಡುತ್ತಿದ್ದನು.
Advertisement
Advertisement
“ನಾನು ಒಂದೆರಡು ದಿನಗಳ ಕಾಲ ಮನೆಯಲ್ಲಿ ಇರಲಿಲ್ಲ. ಆದರೆ ನನ್ನ ಕ್ಯಾಬ್ ಅನ್ನು ರಾಜೇಶ್ ಓಡಿಸುತ್ತಿದ್ದನು. ಮನೆಯ ಕೀ ಕೂಡ ಆತನ ಕೈಯಲ್ಲಿ ಇತ್ತು. ಚಹಾ ಅಂಗಡಿಯನ್ನು ಅವನೇ ನೋಡಿಕೊಳ್ಳುತ್ತಿದ್ದನು. ನಾನು ಹಿಂದಿರುಗಿ ಮನೆಗೆ ಬಂದಾಗ ರಾಜೇಶ್ ಇರಲಿಲ್ಲ. ಆದರೆ ಮನೆಯಿಂದ ಎರಡು ದಿನದಿಂದ ತುಂಬಾ ಕೆಟ್ಟ ವಾಸನೆ ಬರುತ್ತಿತ್ತು. ಕೊನೆಗೆ ನಾನೆ ಮನೆಗೆ ಹೋಗಿ ಹುಡುಕಾಡಿದೆ. ಆಗ ಬೆಡ್ ಕೆಳಗೆ ತುಂಡು ತುಂಡಾದ ಮಹಿಳೆಯ ದೇಹ ಕಂಡು ಬಂದಿದ್ದು, ನೋಡಿ ಶಾಕ್ ಆದೆ ಎಂದು ಮನೆ ಮಾಲೀಕ ಹೇಳಿದ್ದಾರೆ.
Advertisement
ಪತಿಯೇ ನನ್ನ ಮಗಳನ್ನು ಕೊಲೆ ಮಾಡಿ, ಮೃತ ದೇಹವನ್ನು ಪೀಸ್ ಪೀಸ್ ಬೆಡ್ ಕೆಳಗೆ ಇಟ್ಟು 2-3 ದಿನಗಳಿಂದ ರಾಜೇಶ್ ಪರಾರಿಯಾಗಿದ್ದಾನೆ ಎಂದು ಮೃತ ಬಬಿತಾ ಪೋಷಕರು ಆರೋಪಿಸುತ್ತಿದ್ದಾರೆ.
Advertisement
ಮನೆ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಾಲೀಕ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದು, ಆರೋಪಿ ರಾಜೇಶ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv