ಜೈಪುರ: ಬ್ಯಾಂಕ್ ದರೋಡೆಗೆಂದು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬಂದ ಕಳ್ಳನನ್ನು ಬ್ಯಾಂಕ್ ಮ್ಯಾನೇಜರ್ ಕಟ್ಟಿಂಗ್ ಪ್ಲೆಯರ್ ಹಿಡಿದು ಓಡಿಸಿರುವ ಘಟನೆ ರಾಜಸ್ಥಾನದ (Rajasthan) ಶ್ರೀ ಗಂಗಾನಗರದಲ್ಲಿ (Sri Ganganagar) ನಡೆದಿದೆ.
ಶನಿವಾರ ಮರುದಾರ ಗ್ರಾಮೀಣ ಬ್ಯಾಂಕ್‍ನಲ್ಲಿ (Marudhara Gramin Bank) ಈ ಘಟನೆ ನಡೆದಿದ್ದು, ಶಾಖೆಯ ವ್ಯವಸ್ಥಾಪಕರನ್ನು ಪೂನಂ ಗುಪ್ತಾ ಎಂದು ಗುರುತಿಸಲಾಗಿದೆ. ಸದ್ಯ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಮುಖವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬ್ಯಾಗ್ ಹಿಡಿದುಕೊಂಡು ಬ್ಯಾಂಕ್‍ಗೆ ಎಂಟ್ರಿಕೊಟ್ಟ ಕಳ್ಳ, ನಂತರ ಮಾರಾಕಾಸ್ತ್ರ ಹಾಗೂ ಚೀಲವನ್ನು ಪ್ರವೇಶದ್ವಾರದಲ್ಲಿಯೇ ಬಿಟ್ಟು ಎಸ್ಕೇಪ್ ಆಗುವುದನ್ನು ಕಾಣಬಹುದಾಗಿದೆ. ಅಲ್ಲದೇ ಒಳಗಿದ್ದ ಸಿಬ್ಬಂದಿಗೆ ಕಳ್ಳ ಬೆದರಿಕೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: 3ರ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ- ಆರೋಪಿಗೆ 20 ವರ್ಷ ಜೈಲು, 1 ಲಕ್ಷ ದಂಡ
Advertisement
Appreciation is must for this kind of courageous act.
Hats off to exemplary courage shown by Poonam Gupta, manager
Marudhara bank, Sriganganar. pic.twitter.com/p8pPgxPSBC
— Dr Bhageerath Choudhary IRS (@DrBhageerathIRS) October 17, 2022
Advertisement
ದರೋಡೆ ವೇಳೆ ಕಳ್ಳ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡ ಪೂನಂ ಗುಪ್ತಾ ಅವರು, ತಮ್ಮ ಕ್ಯಾಬಿನ್ ಒಳಗಿನಿಂದ ಎದ್ದು ಹೊರಬಂದು ಧೈರ್ಯವಾಗಿ ಕಳ್ಳನ ವಿರುದ್ಧ ಹೋರಾಡಿದ್ದಾರೆ. ಈ ವೇಳೆ ಕಳ್ಳ ಹಣವನ್ನು ಕೇಳುತ್ತಾನೆ ಜೊತೆಗೆ ತಾನು ತಂದಿದ್ದ ಚೀಲದಲ್ಲಿ ಹಣ ತುಂಬುವಂತೆ ಒತ್ತಾಯಿಸುತ್ತಾನೆ. ಇದೇ ವೇಳೆ ಆತನ ಜೇಬಿನಿಂದ ಬಿದ್ದ ಕಟ್ಟಿಂಗ್ ಪ್ಲೆಯರ್ ಅನ್ನು ತಕ್ಷಣವೇ ಎತ್ತಿಕೊಂಡ ಪೂನಂ ಗುಪ್ತಾ ಅವರು, ಅವನಿಗೆ ತೋರಿಸಿ ಓಡಿಸಿದ್ದಾರೆ. ನಂತರ ಬ್ಯಾಂಕಿನ ಮುಖ್ಯ ದ್ವಾರವನ್ನು ಕೂಡಲೇ ಮುಚ್ಚಿಸಿದ್ದಾರೆ. ಇದನ್ನೂ ಓದಿ: AICC ಅಧ್ಯಕ್ಷೀಯ ಚುನಾವಣೆಯಲ್ಲಿ 96ರಷ್ಟು ಮತದಾನ- ಕನ್ನಡಿಗ ಖರ್ಗೆ ಪಟ್ಟಕ್ಕೇರೋದು ಫಿಕ್ಸ್
Advertisement
Advertisement
ಆರೋಪಿ ಶ್ರೀಗಂಗಾನಗರದ ದಾವಡಾ ಕಾಲೋನಿ ನಿವಾಸಿಯಾಗಿದ್ದು, ಆತನನ್ನು ಲವಿಶ್ ಅರೋರಾ ಎಂದು ಗುರುತಿಸಲಾಗಿದೆ. ಘಟನೆ ಕುರಿತಂತೆ ಜವಾಹರ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬ್ಯಾಂಕ್ ಆಡಳಿತ ಮಂಡಳಿ ಪೊಲೀಸರಿಗೆ ವರದಿಯನ್ನೂ ನೀಡಿದೆ.