ಚಾಮರಾಜನಗರ: ಹೆತ್ತ ತಾಯಿಯೊಬ್ಬಳು ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಕೂಡ ವಿಷ ಸೇವಿಸಿರುವ ಘಟನೆ ಚಾಮರಾಜನಗರದಲ್ಲಿ (Chamarajanagar) ನಡೆದಿದೆ.
ಮೃತ ಮಹಿಳೆಯನ್ನು ಶೀಲ ಎಂದು ಗುರುತಿಸಲಾಗಿದೆ. ಈಕೆ ಮಕ್ಕಳಾದ ಯಶವಂತ್ (8) ಮತ್ತು ಸಿಂಧು (6)ಗೆ ವಿಷ ನೀಡಿ ಬಳಿಕ ತಾನು ಕೂಡ ಸಾವಿನ ದಾರಿ ಹಿಡಿಯಲು ಯತ್ನಿಸಿದ್ದಾಳೆ.
ಕುಡಿದು ಬಂದು ಪತಿ ನಿತ್ಯ ಕಿರಿಕಿರಿ ಮಾಡುತ್ತಿದ್ದನು. ಹೀಗಾಗಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಶೀಲ ಈ ಕೃತ್ಯ ಎಸಗಿದ್ದಾರೆ. ಕೂಡಲೇ ಮೂವರನ್ನು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗಳು ಸಿಂಧು ಮೃತಪಟ್ಟಿದ್ದಾಳೆ. ತಾಯಿ ಹಾಗೂ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಲಾಗಿದೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Web Stories