ಟಿಬಿಲಿಸಿ: ಜಾರ್ಜಿಯಾದ ಅಟ್ಲಾಂಟಾ ಕಡೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳು, ವೃದ್ಧನ ಜೊತೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದು, ವಿಮಾನ ಲ್ಯಾಂಡ್ ಆದಾಗ ಆಕೆಯನ್ನು ಬಂಧಿಸಲಾಗಿದೆ.
ಡೆಲ್ಟಾ ಏರ್ಲೈನ್ಸ್ ವಿಮಾನದಲ್ಲಿ ಮಹಿಳೆ, ಮಾಸ್ಕ್ ಧರಿಸದೇ ಊಟ ಮಾಡುತ್ತಿದ್ದ ವೃದ್ಧರೊಬ್ಬರ ಜೊತೆ ವಾಗ್ವಾದ ನಡೆಸಿದ್ದಾಳೆ. ಅಲ್ಲದೆ ಹಲ್ಲೆ ಕೂಡ ಮಾಡಿದ್ದಾಳೆ. ಆದರೆ ಹಲ್ಲೆ ನಡೆಸಿದ ಮಹಿಳೆ ಕೂಡಾ ಸರಿಯಾಗಿ ಮಾಸ್ಕ್ ಧರಿಸಿಲ್ಲ ಎಂಬುದು ಹಾಸ್ಯಕರ ಸಂಗತಿ.
ಊಟ ಮಾಡುತ್ತಿದ್ದ ವೃದ್ಧನಿಗೆ ಮಹಿಳೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದಾಳೆ. ಆಗ ವೃದ್ಧ ತಾನು ಊಟ ಮಾಡುತ್ತಿರುವುದನ್ನು ಆಕೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಮಹಿಳೆ ಆತನ ಮೆಲೆ ಎಗರಾಡಿ ಹಲ್ಲೆ ಮಾಡಿದ್ದಾಳೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!
ಇಬ್ಬರೂ ಅವಹೇಳನಕಾರಿ ಪದಗಳಿಂದ ವಾಗ್ವಾದ ನಡೆಸುತ್ತಿದ್ದಾಗ ವಿಮಾನದ ವ್ಯವಸ್ಥಾಪಕಿ ಹಾಗೂ ಫ್ಲೈಟ್ನ ಅಟೆಂಡರ್ ಅವರಿಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಅದನ್ನು ನಿರ್ಲಕ್ಷಿಸಿ ವೃದ್ಧನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ.
View this post on Instagram
ಫ್ಲೈಟ್ನ ಅಟೆಂಡರ್ ಮಹಿಳೆಯನ್ನು ಅಲ್ಲಿಂದ ಬಿಡಿಸಿ, ಆಕೆಯ ಆಸನದಲ್ಲಿ ಕೂರಿಸುವಲ್ಲಿ ಕೊನೆಗೂ ಸಫಲನಾಗುತ್ತಾನೆ. ವಿಮಾನ ಲ್ಯಾಂಡ್ ಆದಾಗ ಆಕೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: 4 ಬಾರಿ ಕೋವಿಡ್ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್