ಬೀದರ್: ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣು ಮಗುವನ್ನು ಅಪಹರಿಸಿದ್ದ ಮಹಿಳಾ ಆರೋಪಿಯನ್ನು ತೆಲಂಗಾಣ ಹಾಗೂ ಬೀದರ್ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಯನ(34) ಮಗು ಅಪಹರಿಸಿದ್ದ ಆರೋಪಿ. ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಸ್ವಗ್ರಾಮದಲ್ಲಿ ಆರೋಪಿಯನ್ನ ಬಂಧಿಸಿಲಾಗಿದೆ. ಬೀದರ್ ತಾಲೂಕಿನ ಕಾಶಂಪೂರ್ (ಬಿ) ಗ್ರಾಮದ ನಿವಾಸಿಯಾಗಿರುವ ನಯನ ಕಳೆದ ಎರಡು ದಿನಗಳ ಹಿಂದೆ ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣುಮಗು ಅಪಹರಿಸಿ ಬೀದರ್ ಜಿಲ್ಲಾಸ್ಪತ್ರೆಯ ನಲ್ಲಿ ಮಗು ಬಿಟ್ಟು ಪರಾರಿಯಾಗಿದ್ದಳು. ಇದನ್ನೂ ಓದಿ: ಹೈದರಾಬಾದ್‍ನಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆ
ಮದುವೆ ಬಳಿಕ ಹೈದ್ರಾಬಾದ್ ನಲ್ಲಿಯೇ ವಾಸವಾಗಿದ್ದ ನಯನಾಗೆ ಎರಡು ಬಾರಿ ಗರ್ಭಪಾತವಾಗಿತ್ತು. ಇದರಿಂದ ಮನನೊಂದು ನಯನ ಮಗುವನ್ನು ಅಪಹರಿಸಿದ್ದಳು ಎನ್ನಲಾಗಿದೆ.
ಈ ಕುರಿತು ಹೈದ್ರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮಗುವಿನ ಪೋಷಕರಿಂದ ಅಪಹರಣ ಪ್ರಕರಣ ದಾಖಲಾಗಿತ್ತು.