CrimeLatestMain PostNational

ಹಾಡಹಗಲೇ ವಕೀಲೆ ಮೇಲೆ ದುಷ್ಕರ್ಮಿಯಿಂದ ಕುಡುಗೋಲಿನಲ್ಲಿ ಅಟ್ಯಾಕ್

ಚೆನ್ನೈ: ಹಾಡಹಗಲಲ್ಲೇ ಮಹಿಳಾ ವಕೀಲೆಯೊಬ್ಬರ(Woman advocate) ಮೇಲೆ ದುಷ್ಕರ್ಮಿಯೋರ್ವ ಕುಡುಗೋಲಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಮಹಿಳೆಯ ಮುಖ ಹಾಗೂ ಕೈಗಳಿಗೆ ಗಂಭೀರವಾಗಿ ಗಾಯವಾಗಿ ರಕ್ತಸ್ರಾವವಾಗಿದೆ.

ತಮಿಳುನಾಡಿನ(Tamil Nadu) ತಿರುಪ್ಪೂರ್ ಜಿಲ್ಲೆಯಲ್ಲಿ (Tiruppur district) ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಮಹಿಳೆಯನ್ನು  ಕುಮಾರನ್ ಸಲೈನಲ್ಲಿರುವ (mahila court in Kumaran Salai) ಮಹಿಳಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಜಮೀಲಾ ಬಾನು (Jameela Banu) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ

ತಾವು ನಿರ್ವಹಿಸುತ್ತಿರುವ ಹಿಂದಿನ ಪ್ರಕರಣಗಳ (Case) ಬಗ್ಗೆ ಕೆಲವು ಫೈಲ್‍ಗಳನ್ನು ತೆಗೆದುಕೊಳ್ಳಲು ಅವರು ತಮ್ಮ ಮಗಳೊಂದಿಗೆ ವಕೀಲರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಏಕಾಏಕಿ ಕಚೇರಿಗೆ ನುಗ್ಗಿದ ವ್ಯಕ್ತಿಯೋರ್ವ ಜಮೀಲಾ ಬಾನು ಅವರ ಮೇಲೆ ಕುಡುಗೋಲಿನಿಂದ(sickle) ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ತಾಯಿಯನ್ನು ರಕ್ಷಿಸಲು ಬಂದ ಮಗಳು ಕೂಡ ಗಾಯಗೊಂಡಿದ್ದಾರೆ(Injured). ಇದನ್ನೂ ಓದಿ: ಕಾರಿಗೆ ನಾಯಿಯನ್ನು ಕಟ್ಟಿ ನಡುರಸ್ತೆಯಲ್ಲಿ ಎಳೆದಾಡಿದ – ಕ್ರೂರಿ ವೈದ್ಯನ ವಿರುದ್ಧ ಕೇಸ್

ನಂತರ ಜಮೀಲಾ ಬಾನು ಅಳುತ್ತಿರುವ ಶಬ್ಧ ಕೇಳಿಸಿಕೊಂಡು ಸ್ಥಳೀಯರು ಆಗಮಿಸಿದಾಗ, ಆರೋಪಿ ತನ್ನ ಕುಡುಗೋಲನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ತಲೆ ಮತ್ತು ಕೈಗಳಿಗೆ ಗಾಯಗೊಂಡಿದ್ದ ಜಮೀಲಾರನ್ನು ಚಿಕಿತ್ಸೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Live Tv

Leave a Reply

Your email address will not be published.

Back to top button