ಚೆನ್ನೈ: ಹಾಡಹಗಲಲ್ಲೇ ಮಹಿಳಾ ವಕೀಲೆಯೊಬ್ಬರ(Woman advocate) ಮೇಲೆ ದುಷ್ಕರ್ಮಿಯೋರ್ವ ಕುಡುಗೋಲಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಮಹಿಳೆಯ ಮುಖ ಹಾಗೂ ಕೈಗಳಿಗೆ ಗಂಭೀರವಾಗಿ ಗಾಯವಾಗಿ ರಕ್ತಸ್ರಾವವಾಗಿದೆ.
ತಮಿಳುನಾಡಿನ(Tamil Nadu) ತಿರುಪ್ಪೂರ್ ಜಿಲ್ಲೆಯಲ್ಲಿ (Tiruppur district) ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಮಹಿಳೆಯನ್ನು ಕುಮಾರನ್ ಸಲೈನಲ್ಲಿರುವ (mahila court in Kumaran Salai) ಮಹಿಳಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಜಮೀಲಾ ಬಾನು (Jameela Banu) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ
Advertisement
Advertisement
ತಾವು ನಿರ್ವಹಿಸುತ್ತಿರುವ ಹಿಂದಿನ ಪ್ರಕರಣಗಳ (Case) ಬಗ್ಗೆ ಕೆಲವು ಫೈಲ್‍ಗಳನ್ನು ತೆಗೆದುಕೊಳ್ಳಲು ಅವರು ತಮ್ಮ ಮಗಳೊಂದಿಗೆ ವಕೀಲರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಏಕಾಏಕಿ ಕಚೇರಿಗೆ ನುಗ್ಗಿದ ವ್ಯಕ್ತಿಯೋರ್ವ ಜಮೀಲಾ ಬಾನು ಅವರ ಮೇಲೆ ಕುಡುಗೋಲಿನಿಂದ(sickle) ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ತಾಯಿಯನ್ನು ರಕ್ಷಿಸಲು ಬಂದ ಮಗಳು ಕೂಡ ಗಾಯಗೊಂಡಿದ್ದಾರೆ(Injured). ಇದನ್ನೂ ಓದಿ: ಕಾರಿಗೆ ನಾಯಿಯನ್ನು ಕಟ್ಟಿ ನಡುರಸ್ತೆಯಲ್ಲಿ ಎಳೆದಾಡಿದ – ಕ್ರೂರಿ ವೈದ್ಯನ ವಿರುದ್ಧ ಕೇಸ್
Advertisement
Advertisement
ನಂತರ ಜಮೀಲಾ ಬಾನು ಅಳುತ್ತಿರುವ ಶಬ್ಧ ಕೇಳಿಸಿಕೊಂಡು ಸ್ಥಳೀಯರು ಆಗಮಿಸಿದಾಗ, ಆರೋಪಿ ತನ್ನ ಕುಡುಗೋಲನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ನಂತರ ತಲೆ ಮತ್ತು ಕೈಗಳಿಗೆ ಗಾಯಗೊಂಡಿದ್ದ ಜಮೀಲಾರನ್ನು ಚಿಕಿತ್ಸೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.