InternationalLatestMain Post

ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ

ಲಂಡನ್: ಇಂದು ಬ್ರಿಟನ್‍ನ ರಾಣಿ 2ನೇ ಎಲಿಜಬೆತ್ (Queen Elizabeth II) ಅಂತ್ಯಕ್ರಿಯೆ ನೆರವೇರಲಿದ್ದು ಲಂಡನ್‍ನಲ್ಲಿ(London) ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಸೇರಿ 500ಕ್ಕೂ ಹೆಚ್ಚು ವಿಶ್ವದ ನಾಯಕರು ಅಂತ್ಯಕ್ರಿಯೆಯಲ್ಲಿ(Funeral) ಭಾಗಿ ಆಗಲಿದ್ದಾರೆ. ಅಂತ್ಯಕ್ರಿಯೆಗೆ 10 ಲಕ್ಷ ಜನರು ಸೇರುವ ಹಿನ್ನೆಲೆ ಬ್ರಿಟನ್‍ನಲ್ಲಿ(Britain) ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಇದನ್ನೂ ಓದಿ: ಜನರಿಗೆ ಸಿಕ್ರೇಟ್ ಲೆಟರ್- 2085 ರವರೆಗೂ ತೆರೆಯದಿರಲು ರಾಣಿ ಸೂಚನೆ

ವಿಶ್ವದ ನಾಯಕರು ಬಸ್‍ನಲ್ಲಿ ಅಂತ್ಯಕ್ರಿಯೆಗೆ ಆಗಮಿಸಿದರೆ, ಅಮೆರಿಕ ಅಧ್ಯಕ್ಷ ಬೈಡನ್‍ಗೆ (Joe Biden) ತಮ್ಮ ವಿಶೇಷ ಭದ್ರತಾ ವಾಹನ ಬೀಸ್ಟ್‌ನಲ್ಲಿ ಬರಲು ಅವಕಾಶ ಕೊಡಲಾಗಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೆರವಣಿಗೆ ಆರಂಭವಾಗಲಿದ್ದು, ಮಧ್ಯರಾತ್ರಿ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನು ಎಲ್‍ಇಡಿ ಸ್ಕ್ರೀನ್ (LED Screen), ಥಿಯೇಟರ್‌ಗಳಲ್ಲಿ ನೇರಪ್ರಸಾರ (Live) ಮಾಡಲು ಸಿದ್ಧತೆ ನಡೆಸಲಾಗಿದೆ.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-2 ಅವರು, ಸ್ಕಾಟ್ಲೆಂಡ್ ನ ಬಾಲ್ಮೊರಲ್ ಕ್ಯಾಸ್ಟಲ್ ನಲ್ಲಿ ಸೆ. 8ರಂದು ನಿಧನರಾಗಿದ್ದರು. 25ನೇ ವಯಸ್ಸಿಗೆ ಬ್ರಿಟನ್ ರಾಣಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಎಲಿಜಬೆತ್-2 ತಮ್ಮ 96ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರು 1923ರಿಂದ ಬ್ರಿಟನ್‍ನ ರಾಣಿಯಾಗಿದ್ದರು. 1952ರಲ್ಲಿ ತನ್ನ ತಂದೆ ಜಾರ್ಜ್ VIರ ಮರಣದ ನಂತರ ಎಲಿಜಬೆತ್-2 ಅವರು ಬ್ರಿಟನ್‍ನ ಆಡಳಿತವನ್ನು ವಹಿಸಿಕೊಂಡರು. ಬ್ರಿಟನ್ ಅಲ್ಲದೇ ಇತರ 15 ದೇಶಗಳಿಗೂ ಅವರು ರಾಣಿಯಾಗಿದ್ದರು. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

ಫಾರ್ಚೂನ್ ವರದಿ ಪ್ರಕಾರ ರಾಣಿ ಎಲಿಜಬೆತ್-2 ಸುಮಾರು 500 ಮಿಲಿಯನ್ ಡಾಲರ್  (ಭಾರತೀಯ ರೂಪಾಯಿಗಳಲ್ಲಿ ಸುಮಾರು 3,985 ಕೋಟಿ ರೂ.) ಸಂಪತ್ತನ್ನು ಬಿಟ್ಟು ಹೋಗಿದ್ದಾರೆ. ಈ ಸಂಪತ್ತಿಗೆ ಅವರ ಪುತ್ರ ಪ್ರಿನ್ಸ್ ಚಾರ್ಲ್ಸ್ (Prince Charles) ವಾರಸುದಾರ ಆಗಲಿದ್ದಾರೆ. ಜೊತೆಗೆ ಬ್ರಿಟನ್‍ನ ಮುಂದಿನ ರಾಜ ಇವರೇ ಆಗಲಿದ್ದಾರೆ.

Live Tv

Leave a Reply

Your email address will not be published.

Back to top button