ಪ್ರಿಯಕರನೊಂದಿಗೆ ಪತ್ನಿಯ ಖಾಸಗಿ ಕ್ಷಣ ವೀಡಿಯೋ ಮಾಡಿ ಹಂಚಿಕೊಂಡ ಪತಿ!

Public TV
1 Min Read
Mobile video recording

ಮುಂಬೈ: ಥಾಣೆಯ (Thane) ಡೊಂಬಿವಲಿಯ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಇದ್ದ ಖಾಸಗಿ ಕ್ಷಣಗಳನ್ನು ಆಕೆಯ ಮಾಜಿ ಪತಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ ಎಂದು ಆರೋಪಿಸಿದ್ದಾಳೆ.

ಮಹಿಳೆ (Woman) ಪ್ರಿಯಕರನೊಂದಿಗೆ ಇರುವುದನ್ನು ರಹಸ್ಯವಾಗಿ ಮಾಜಿ ಪತಿ ಚಿತ್ರೀಕರಿಸಿದ್ದಾನೆ. ಆ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ವಿಚ್ಛೇದಿತ ಪತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಾನನಷ್ಟ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯು ಮಹಿಳೆಯ ಮನೆಯಲ್ಲಿ ರಹಸ್ಯ ಕ್ಯಾಮೆರಾವನ್ನು ಅಳವಡಿಸಿದ್ದ. ಇದರಿಂದ ಖಾಸಗಿ ವೀಡಿಯೋ ಚಿತ್ರೀಕರಿಸಿದ್ದಾನೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article