ತುಮಕೂರು: ಮಹಿಳೆಯೋರ್ವಳು ತನ್ನ ಅಂದವನ್ನೇ ಬಂಡವಾಳವಾಗಿಟ್ಟುಕೊಂಡು ಮೂರ್ನಾಲ್ಕು ಮದುವೆಯಾಗಿ ಹಣ, ಒಡವೆ ವಸೂಲಿ ಮಾಡುತ್ತಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.
ತುಮಕೂರು ನಗರದ ಎಸ್.ಎಸ್.ಪುರಂ ನಿವಾಸಿ ಜಗದೀಶ್ ಎನ್ನುವರು ಈ ರೀತಿಯ ಆರೋಪ ಮಾಡಿದ್ದಾರೆ. ತಿಪಟೂರು ತಾಲೂಕಿನ ಈಚನೂರು ಮೂಲದ ಪುಷ್ಪಾವತಿ ಎನ್ನುವ ಮಹಿಳೆ ಹಣ ಇರುವವರನ್ನು ಯಾಮಾರಿಸಿ ಮದುವೆಯಾಗಿ ಅವರಿಂದ ಹಣ, ಒಡವೆ ಕಿತ್ತುಕೊಂಡು ಬಳಿಕ ಅವರ ಮೇಲೆಯೇ ಕಿರುಕುಳ ಆರೋಪ ಮಾಡಿ ವಿಚ್ಛೇದನ ಪಡೆಯುವುದೇ ಕಾಯಕ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
2000 ಇಸವಿಯಲ್ಲಿ ತಿಪಟೂರು ಮೂಲದ ಲಿಂಗದೇವರು ಎನ್ನುವವರನ್ನು ಮದುವೆಯಾಗಿದ್ದ ಪುಷ್ಪಾವತಿ, ಅವರಿಂದಲೂ ಆಸ್ತಿ ಕಿತ್ತುಕೊಂಡು ವಿಚ್ಛೇದನ ಪಡೆದಿದ್ದಾಳೆ. ನಂತರ 2016 ರಲ್ಲಿ ಜಗದೀಶ್ ಎನ್ನುವರನ್ನು ಮದುವೆಯಾಗಿ ಅವ್ರಿಂದಲೂ ದುಡ್ಡು, ಒಡವೆ ಪಡೆದು ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ ಇದೀಗ ವಿಚ್ಛೇದನ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾಳೆ.
ಈ ಮುಂಚೆ ಹಾಸ್ಪಿಟಲ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಅನೇಕ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಈಕೆ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದು, ಪಕ್ಕದ ಮನೆ ಹುಡುಗನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪುಷ್ಪಾವತಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮೇಲೆ ಅವಳ ನಿಜಬಣ್ಣ ಗೊತ್ತಾಗಿದೆ ಎಂದು ಪತಿ ಜಗದೀಶ್ ಆರೋಪಿಸಿದ್ದಾರೆ. ಇದೀಗ ಬೆಂಗಳೂರಿನಲ್ಲಿ ವಾಸವಿರುವ ಈಕೆ ಇನ್ನೊಬ್ಬರನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಸದ್ಯ ನಮಗೆ ನ್ಯಾಯ ಬೇಕು ಅಂತಾ ಪುಷ್ಪಾವತಿಯ ಇಬ್ಬರು ಗಂಡಂದಿರು ಅಳಲು ತೋಡಿಕೊಂಡಿದ್ದಾರೆ.