ಜನಸಂದಣಿ ಮಧ್ಯೆಯೇ ಮಹಿಳೆ ಬರ್ಬರ ಹತ್ಯೆ – ಬೆಚ್ಚಿಬಿದ್ದ ದೆಹಲಿ ಮಂದಿ

Public TV
1 Min Read
crime scene e1602054934159

ನವದೆಹಲಿ: ಜನಸಂದಣಿ ನಡುವೆ ವ್ಯಕ್ತಿಯೋರ್ವ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿರುವ ಬೆಚ್ಚಿ ಬೀಳಿಸುವ ಘಟನೆ ದೆಹಲಿಯ ದ್ವಾರಕ ಪ್ರದೇಶದಲ್ಲಿ ನಡೆದಿದೆ. ಇನ್ನೂ ಈ ಘಟನೆ ಹತ್ತಿರದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೀಡಿಯೋದಲ್ಲಿ ವ್ಯಕ್ತಿ ತನ್ನ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಮಹಿಳೆ ಹತ್ತಿರ ಬರುತ್ತಾನೆ. ಈ ವೇಳೆ ಅಂಗಡಿಯ ಹೊರಗಿರುವ ಕಾಲುದಾರಿಯ ಮೇಲೆ ನಿಂತಿದ್ದ ಮಹಿಳೆ, ಆತನನ್ನು ಕೋಲಿನ ರೀತಿಯ ವಸ್ತುವಿನಿಂದ ಓಡಿಸಲು ಪ್ರಯತ್ನಿಸಿದ್ದಾರೆ. ನಂತರ ಆರೋಪಿ ನಿಧಾನವಾಗಿ ಬ್ಯಾಗ್ ಅನ್ನು ಹಿಡಿದುಕೊಂಡು ದೂರ ಹೋಗುತ್ತಾನೆ. ಆದರೆ ಕೆಲವೇ ಸೆಕೆಂಡ್‍ಗಳಲ್ಲಿ ಮಹಿಳೆ ಬಳಿ ಮತ್ತೆ ಬಂದು ಕತ್ತು ಸೀಳಿ ಪರಾರಿಯಾಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:  300ರೂ. ಸಾಲ ತೀರಿಸದ್ದಕ್ಕೆ ಹತ್ಯೆಗೈದ ಪಾಪಿಗಳು

Police Jeep

ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ಆರೋಪಿಯ ಬೆನ್ನಟ್ಟಿ ಚೆನ್ನಾಗಿ ಥಳಿಸಿದ್ದಾರೆ. ನಂತರ ತೀವ್ರವಾಗಿ ಗಾಯಗೊಂಡ ಆತನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

ಮೃತದುರ್ದೈವಿಯನ್ನು ವಿಭಾ(30) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ದೀಪಕ್ ಎಂದು ಗುರುತಿಸಲಾಗಿದೆ. ವಿಭಾ ಪತಿಯೊಂದಿಗೆ ಸಣ್ಣ ತರಕಾರಿ ಅಂಗಡಿಯನ್ನು ನಡೆಸುತ್ತಿದ್ದು, ವ್ಯಾಪಾರ ಮಾಡುತ್ತಿದ್ದ ವೇಳೆ ಕುಡಿದು ಬಂದ ಆರೋಪಿ ವಿಭಾ ಜೊತೆಗೆ ಜಗಳವಾಡಿದ್ದಾನೆ. ಈ ವೇಳೆ ವಿಭಾ ಆತನಿಗೆ ಪೊರಕೆ ಮತ್ತು ಕಲ್ಲುಗಳಿಂದ ಹೊಡೆಯಲು ಪ್ರಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ವಿಭಾರನ್ನು ಹತ್ಯೆಗೈದಿದ್ದಾನೆ. ಈ ವೇಳೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ವಿಭಾ ರಸ್ತೆ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *