ಬೆಂಗಳೂರು: ಮಂಡ್ಯ ಗೆಲ್ಲದೆ ನಮ್ಮ ಗೆಲುವು ಪರಿಪೂರ್ಣ ಆಗದು. ಬಹಳ ಜನ ಬರುತ್ತಾರೆ ಕಾದು ನೋಡಿ. ನಮ್ಮ ಮಿಷನ್ 150. ಇದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಮಂಡ್ಯದಲ್ಲಿ ಯುವ ನಾಯಕತ್ವ ವಿಚಾರದ ಬಗ್ಗೆ ಸಿಎಂ ಹೇಳಿಕೆ, ಅಂಬರೀಶ್ ಪುತ್ರ ಅಭಿಷೇಕ್‌ಗೆ ಗಾಳ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಗೆಲ್ಲದೆ ಬಿಜೆಪಿಗೆ ಗೆಲುವೇ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಮಂಡ್ಯವನ್ನು ಬಿಜೆಪಿ ಭದ್ರಕೋಟೆ ಮಾಡಿಕೊಳ್ಳಲಿದೆ ಎಂದು ನುಡಿದರು. ಇದನ್ನೂ ಓದಿ: ಕಾಣೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಜಿಲ್ಲಾಧಿಕಾರಿ ಮುಂದೆ ತಾಯಿಯ ಕಣ್ಣೀರು
Advertisement
Advertisement
ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆದರೆ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳಲಿದೆ. ಅವರ ಟ್ರ್ಯಾಕ್ ರೆಕಾರ್ಡ್ ತೆಗೆದುನೋಡಿ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಎಲ್ಲಿ ಪ್ರಚಾರ ಮಾಡುತ್ತಾರೋ ಅಲ್ಲಿ ಸೋಲುತ್ತಾರೆ. ಸಿದ್ದರಾಮಯ್ಯ ಮತ್ತೆ ನಾನೇ ಮುಖ್ಯಮಂತ್ರಿ ಎಂದು ಹೇಳಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತರು. ಬಾದಾಮಿಯಲ್ಲಿ ತಿಣುಕಾಡಿ ಗೆದ್ದರು. 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕೂಡ ಪಡೆಯಲ್ಲ ಎಂದು ಕುಟುಕಿದರು.
Advertisement
ಸೋತ ತಕ್ಷಣ ಜನರು ಕೊಟ್ಟ ತೀರ್ಪು ಎಂದು ಅವರು ಒಪ್ಪುವುದಿಲ್ಲ. ಇವಿಎಂ ಮೇಲೆ ಅಪವಾದ ಮಾಡುತ್ತಾರೆ. ಬರೆದಿಡಿ, ಇದನ್ನು ಬೇಕೆಂದರೆ ರೆಕಾರ್ಡ್ ಮಾಡಿ. ಈ ವಿಚಾರವನ್ನೇ ಹೇಳುತ್ತಾರೆ. ನಾನು ಭವಿಷ್ಯ ಹೇಳುತ್ತಿದ್ದೇನೆ ಎಂದರು. ಇದನ್ನೂ ಓದಿ: ಡಿಕೆಶಿ ಏನೇ ಮಾಡಿದ್ರು ಅಂಜುವ ಮಗ ನಾನಲ್ಲ: ಯತ್ನಾಳ್
Advertisement
ಜೆಡಿಎಸ್‌ಗೂ ತಿರುಗೇಟು ಕೊಟ್ಟ ಸಿ.ಟಿ.ರವಿ, ಹೆಚ್.ಡಿ.ರೇವಣ್ಣ ಅವರಿಗೆ ಮಂತ್ರ ತಂತ್ರದ ಮೇಲೆ ನಂಬಿಕೆ, ನಮಗೆ ಜನತಂತ್ರದ ಮೇಲೆ ನಂಬಿಕೆ ಇದೆ ಎಂದು ವ್ಯಂಗ್ಯವಾಡಿದರು.