ಚಾಮರಾಜನಗರ: 2008ರಲ್ಲಿ ಕೊಳ್ಳೆಗಾಲದಿಂದ ನಾನೇ ಟಿಕೆಟ್ ಕೊಡಿಸಿದ್ದನ್ನು ಧೃವನಾರಾಯಣ್ ಮರೆತಿದ್ದು, ಮೊದಲ ದಿನಗಳನ್ನು ನೆನಪು ಮಾಡಿಕೊಳ್ಳಬೇಕು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಚುನಾವಣೆಯಲ್ಲಿ ಎಲ್ಲಾ ನನ್ನ ಕೈಯಲ್ಲಿ ಇತ್ತು. ಧೃವನಾರಾಯಣ್ ದಿನ ಬೆಳಗ್ಗೆ ಗೋಗರೆದು ನನ್ನ ಕಾಲು ಹಿಡಿಯಲು ಬರುತ್ತಿದ್ದರು. ನಾನು ಇಲ್ಲ ಅಂತ ಅಂದಿದ್ದರೆ ಅವರು ಪಾರ್ಲಿಮೆಂಟ್ ಅಲ್ಲ, ಶಾಸಕ ಸಹ ಆಗುತ್ತಿರಲಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ನನಗೆ ಚುನಾವಣೆಗೆ ನಿಲ್ಲು ಅಂತ ಹೇಳಿದ್ದರು. ಆಗ ನಾನು ಧೃವನಾರಾಯಣ್‍ಗೆ ಟಿಕೆಟ್ ಕೊಡಿಸಿದೆ. ಅದನ್ನೆಲ್ಲಾ ಅವರು ನೆನೆದುಕೊಳ್ಳಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ:ಶ್ರೀನಿವಾಸ್ ಪ್ರಸಾದ್ ನನ್ನ ಗುರುವೇ ಅಲ್ಲ – ಗುರು ವಿರುದ್ಧವೇ ತಿರುಗಿಬಿದ್ದ ಧೃವನಾರಾಯಣ್
Advertisement
Advertisement
ಸಂತೇಮರಹಳ್ಳಿ ಕ್ಷೇತ್ರ ಕೊಳ್ಳೆಗಾಲಕ್ಕೆ ಸೇರ್ಪಡೆಯಾದಾಗ ಧೃವನಾರಾಯಣ್ ಎಲ್ಲಿಂದ ಸ್ಪರ್ಧೆ ಮಾಡಬೇಕೆಂಬ ಗೊಂದಲದಲ್ಲಿದ್ದರು. ಅಂದು ಕೊಳ್ಳೆಗಾಲದಲ್ಲಿ ಜಿ.ಎನ್.ನಂಜುಡಸ್ವಾಮಿ ಪ್ರಬಲ ಕಾಂಗ್ರೆಸ್ ಮುಖಂಡರಾಗಿದ್ದರೂ, ಧ್ರುವನಾರಾಯಣ್ ಅವರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದರ ಪರಿಣಾಮ ಟಿಕೆಟ್ ಸಿಕ್ಕಿತ್ತು. ನಮ್ಮ ಸಹಾಯವನ್ನು ನೆನದು ಧೃವನಾರಾಯಣ್ ಜವಬ್ದಾರಿಯುತವಾಗಿ ಮಾತನಾಡಬೇಕು ಎಂದು ಶ್ರೀನಿವಾಸ್ ಪ್ರಸಾದ್ ಆಕ್ರೋಶ ಹೊರಹಾಕಿದರು.
Advertisement
Advertisement
ಧೃವನಾರಾಯಣ್ ಹೇಳಿದ್ದೇನು?:
ನಾನು ಮೊದಲು ಶಾಸಕನಾದಾಗ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ಸಿನಲ್ಲಿ ಇರಲಿಲ್ಲ. ನಾನು ಸಂತೇಮರಹಳ್ಳಿ ಕ್ಷೇತ್ರದಲ್ಲಿ ಗೆದ್ದಾಗ ಅವರು ಜೆಡಿಎಸ್‍ನಲ್ಲಿ ಇದ್ದರು. ನನ್ನನ್ನು ರಾಜಕೀಯವಾಗಿ ರಾಜಶೇಖರಮೂರ್ತಿ ಅವರು ಬೆಳೆಸಿದ್ದಾರೆ. ನಾನು ಮೊದಲ ಬಾರಿ ಗೆದ್ದಾಗ ಇಡೀ ಜಿಲ್ಲೆಯಲ್ಲಿ ನಾನು ಒಬ್ಬನೇ ಕಾಂಗ್ರೆಸ್ ಶಾಸಕನಾಗಿದ್ದೆ. ನಾನು ಗೆದ್ದಾಗ ಅವರು ಕಾಂಗ್ರೆಸ್ಸಿನಲ್ಲಿ ಇರಲೇ ಇಲ್ಲ. ಪ್ರಸಾದ್ ಅವರು 2004 ಆದ ಮೇಲೆ ಕಾಂಗ್ರೆಸ್ಸಿಗೆ ಬಂದಿದ್ದಾರೆ ಎಂದು ಧೃವನಾರಯಣ್ ನೇರವಾಗಿ ಶ್ರೀನಿವಾಸ್ ಪ್ರಸಾದ್ ನನ್ನ ಗುರುವಲ್ಲ ಎಂದು ಹೇಳಿದ್ದರು.
2014ರ ಫಲಿತಾಂಶ:
2014ರಲ್ಲಿ ಚಾಮರಾಜನಗರ (ಎಸ್‍ಸಿ) ಲೋಕಸಭೆ ಕ್ಷೇತ್ರದಿಂದ ಧೃವನಾರಾಯಣ್ ಅವರು ಕಾಂಗ್ರೆಸ್‍ನಿಂದ ಸ್ಪರ್ಧಿಸಿ 5,67,782 ಮತಗಳನ್ನು ಪಡೆದು ಜಯಮಾಲೆ ಧರಿಸಿದ್ದರು. ಹಾಗೆಯೇ ಇವರ ವಿರುದ್ಧ ಬಿಜೆಪಿಯಿಂದ ಎ.ಆರ್.ಕೃಷ್ಣಮೂರ್ತಿ ಅವರು ಸ್ಪರ್ಧಿಸಿ 4,26,600 ಮತಗಳನ್ನು ಪಡೆದಿದ್ದರು. ಈ ವೇಳೆ ಎ.ಆರ್.ಕೃಷ್ಣಮೂರ್ತಿ ವಿರುದ್ಧ 1,41,182 ಮತಗಳ ಅಂತರದಲ್ಲಿ 12.60% ಮಾರ್ಜಿನ್‍ನಲ್ಲಿ ಧೃವನಾರಾಯಣ್ ಗೆಲುವನ್ನು ಸಾಧಿಸಿದ್ದರು.
ಈ ಬಾರಿ ಚಾಮರಾಜನಗರ (ಎಸ್‍ಸಿ) ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಯಾಗಿ ಶ್ರೀನಿವಾಸ್ ಪ್ರಸಾದ್ ಅಭ್ಯರ್ಥಿಯಾಗಿದ್ದಾರೆ. ಅಲ್ಲದೆ ಅವರ ವಿರುದ್ಧವಾಗಿ ಕಾಂಗ್ರೆಸ್ಸಿನಿಂದ ಧೃವನಾರಾಯಣ್ ಕಣಕ್ಕಿಳಿದಿದ್ದಾರೆ.