ಕಲಬುರಗಿ: ನಗರದ ನಿವಾಸಿಯೊಬ್ಬರಿಗೆ ಪಾಸ್‍ಪೋರ್ಟ್ ಪಡೆಯಲು ಅರ್ಜಿ ಹಾಕಿದ ಒಂದೇ ವಾರದಲ್ಲಿ ಅಧಿಕಾರಿಗಳು ಯಾವುದೇ ವಿಚಾರಣೆ ನಡೆಸದೇ ಪಾಸ್‍ಪೋರ್ಟ್ ನೀಡಿದ್ದಾರೆ.
ಮೊಹಮ್ಮದ್ ಸಜ್ಜಾದ್ ಕೇವಲ ಒಂದೇ ವಾರದಲ್ಲಿ ಪಾಸ್‍ಪೋರ್ಟ್ ಪಡೆದ ವ್ಯಕ್ತಿ. ಮೊಹಮ್ಮದ್ ಈ ಮೊದಲು 2007ರಲ್ಲಿ ಪಾಸ್‍ಪೋರ್ಟ್ ಪಡೆದು ಸೌದಿ ಅರೇಬಿಯಾದ ರಿಯಾಕ್‍ನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಲು ಹೋಗಿದ್ದರು. 2013 ರಲ್ಲಿ ಸೌದಿ ಅರೇಬಿಯಾದಿಂದ ಮರಳಿ ಭಾರತಕ್ಕೆ ಬಂದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಚಾರಣೆ ನೆಪದಲ್ಲಿ ಅಧಿಕಾರಿಗಳು ಪಾಸ್‍ಪೋರ್ಟ್ ನ್ನು ವಶಪಡಿಸಿಕೊಂಡಿದ್ದರು.
ಬಳಿಕ 2014 ರಲ್ಲಿ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಪಾಸ್‍ಪೋರ್ಟ್ ಬಗ್ಗೆ ಆರ್‍ಟಿಐ ಅರ್ಜಿ ಸಲ್ಲಿಸಿದಾಗ ಆ ಕುರಿತು ಅಪೂರ್ಣ ಮಾಹಿತಿ ನೀಡಿದ್ದಾರೆ. ನಂತರ ವಿದೇಶಾಂಗ ವ್ಯವಹಾರಗಳ ಸಚಿವರು ಅವರನ್ನು ಅಪಿಲ್ ಹಾಕಿದಾಗ ಆ ಮೇಲ್ಮನವಿ ಸೌದಿಗೇ ಕಳುಹಿಸಲಾಯಿತ್ತು. ಅಲ್ಲಿ ಸಹ ಅಪೂರ್ಣ ಮಾಹಿತಿ ಬಂದಿದೆ.
ಎರಡನೇ ಬಾರಿಗೆ ಕೇಂದ್ರೀಯ ಮಾಹಿತಿ ಕಮಿಷನ್‍ಗೆ ಆರ್‍ಟಿಐ ಅಡಿಯಲ್ಲಿ ಮೇಲ್ಮನವಿ ಸಲ್ಲಿಸಿ, ಹೊಸ ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದಂತೆ ಯಾವುದೇ ವಿಚಾರಣೆ ನಡೆಸದೇ ಅಧಿಕಾರಿಗಳು ಕೇವಲ ಒಂದು ವಾರದಲ್ಲಿ ಮೊಹಮ್ಮದ್ ಸಜ್ಜಾದ್‍ರಿಗೆ ಪಾಸ್‍ಪೋರ್ಟ್ ನೀಡುವ ಮೂಲಕ ಅಧಿಕಾರಿಗಳು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.