ಚಿತ್ರದುರ್ಗ: ದಿನ ಕಳೆದಂತೆ ಮುರುಘಾ ಶ್ರೀಗಳ (Murugha Sri) ವಿರುದ್ಧ ಪೋಕ್ಸೋ ಕೇಸ್ ಕೂಡ ಹಲವು ತಿರುವು ಪಡೆಯುತ್ತಿದೆ. ಶ್ರೀಗಳ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಗೆ ಆಮಿಷ ಒಡ್ಡಿದ ಆರೋಪ ಕೇಳಿ ಬಂದಿದೆ.
ಆಮಿಷ ಒಡ್ಡಿರುವ ಬಗ್ಗೆ ವಿಸೃತ ತನಿಖೆ ನಡೆಸುವಂತೆ ಕೋರಿ ಒಡನಾಡಿ ಸಂಸ್ಥೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದಿದೆ. ಸಂತ್ರಸ್ತ ಬಾಲಕಿಗೆ ಆಕೆಯ ತಂದೆ ಬಾಲ ಭವನದ ದೂರವಾಣಿಗೆ ಕರೆ ಮಾಡಿದ್ರು. ಸ್ವಾಮಿಗಳು ನಮ್ಮನ್ನು ನೋಡಿಕೊಂಡಿದ್ದಾರೆ. ಹಣ ಕೊಟ್ಟಿದ್ದಾರೆ. ನೀನು ಕೇಸ್ ಮುಂದುವರಿಸುವುದು ಬೇಡ. ದೂರನ್ನು ವಾಪಾಸ್ ತೆಗೆದುಕೊಂಡು ನನ್ನ ಜೊತೆ ಬರಲು ನೋಡು ಎಂದು ಹೇಳುತ್ತಿದ್ದುದನ್ನು ಕೇಳಿಸಿಕೊಂಡೆ ಅಂತಾ ಸಂತ್ರಸ್ತೆಯ ಜೊತೆಗಾರ್ತಿ ಹೇಳಿರೋದಾಗಿ ಪತ್ರದಲ್ಲಿ ಒಡನಾಡಿ ಸಂಸ್ಥೆ ಉಲ್ಲೇಖಿಸಿದೆ. ಇದನ್ನೂ ಓದಿ: ಇನ್ಮುಂದೆ ಖಾಸಗಿ ಜಾಗದಲ್ಲಿ ಶ್ರೀಗಂಧ ಬೆಳೆದು ರೈತರೇ ಮಾರಾಟ ಮಾಡಬಹುದು
ಈ ದೂರವಾಣಿ ಕರೆ ಬಂದ ಮೇಲೆಯೆ ಆ ಬಾಲಕಿಯನ್ನು ಆರೋಪಿಯ ಪರ ನಿಂತಿದ್ದ ಚಿಕ್ಕಪ್ಪ ಹಾಗೂ ತಂದೆಯೊಡನೆ ಚಿತ್ರದುರ್ಗದ ಸಿಡಬ್ಲ್ಯೂಸಿ (CWC) ಕಳುಹಿಸಿ ಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಇವರ ಈ ಹೆಜ್ಜೆಗೆ ಮತ್ತೋರ್ವ ಬಾಲಕಿ ನೀಡಿರುವ ಹೇಳಿಕೆಯು ಪೂರಕವಾಗಿ ನಿಂತಿದೆ. ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಹಣದ ಆಮಿಷ ಒಡ್ಡಿ ಮುಚ್ಚಿ ಹಾಕಲು ಆರೋಪಿಗಳು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಒಡನಾಡಿ ಸಂಸ್ಥೆ ದೂರಿದೆ. ಇದನ್ನೂ ಓದಿ: ದುಬೈ ಅಥವಾ ನ್ಯೂಯಾರ್ಕ್‌ನಲ್ಲಿ ಕುಟುಂಬದ ಕಚೇರಿ ತೆರೆಯಲು ಮುಂದಾದ ಅದಾನಿ