LatestMain PostNational

ದುಬೈ ಅಥವಾ ನ್ಯೂಯಾರ್ಕ್‌ನಲ್ಲಿ ಕುಟುಂಬದ ಕಚೇರಿ ತೆರೆಯಲು ಮುಂದಾದ ಅದಾನಿ

ಮುಂಬೈ: ವಿಶ್ವದ 3ನೇ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ (Gautam Adani) ದುಬೈ ಅಥವಾ ನ್ಯೂಯಾರ್ಕ್‌ನಲ್ಲಿ(Dubai or New York) ಕುಟುಂಬದ ಕಚೇರಿ (Family Office) ತೆರೆಯಲು ಮುಂದಾಗಿದ್ದಾರೆ.

ವಿದೇಶದಲ್ಲಿ ಆದಾನಿ ಕುಟುಂಬದ ವೈಯಕ್ತಿಕ ನಿಧಿಯನ್ನು ಹೂಡಿಕೆ ಮಾಡಲು ಕಚೇರಿ ತೆರೆಯುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ.

ಅದಾನಿ ಕುಟುಂಬ ಈಗ ಸಲಹೆಗಾರರು ಮತ್ತು ತೆರಿಗೆ ತಜ್ಞರ ಜೊತೆ ಮಾತುಕತೆ ನಡೆಸುತ್ತಿದೆ. ಇವರು ನೀಡುವ ಸಲಹೆ ಆಧಾರದ ಮೇಲೆ ಅಂತಿಮವಾಗಿ ಕಚೇರಿ ಸ್ಥಳ ನಿರ್ಧಾರವಾಗಲಿದೆ.  ಇದನ್ನೂ ಓದಿ: ಇಳಿಯ ವಯಸ್ಸಿನಲ್ಲಿ ಸಪ್ತಪದಿ ತುಳಿದ ನವಜೋಡಿ – ಪತ್ನಿಯ ಅಕ್ಕನಿಗೆ ಬಾಳು ಕೊಟ್ಟ ಮಾಜಿ ಮೇಯರ್

ಉದ್ಯಮಿಯ ಹಿರಿಯ ಸಹೋದರ ವಿನೋದ್ ಅದಾನಿ ದುಬೈನಲ್ಲಿ ನೆಲೆಸಿದ್ದು ಸಿಂಗಾಪುರ ಮತ್ತು ಜಕಾರ್ತಾದಲ್ಲಿ ವ್ಯಾಪಾರ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಹುರುನ್ ಇಂಡಿಯಾ ಅನಿವಾಸಿ ಭಾರತೀಯ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದ್ದು ಈ ಪಟ್ಟಿಯಲ್ಲಿ ವಿನೋದ್‌ ಅದಾನಿ 6ನೇ ಸ್ಥಾನ ಪಡೆದಿದ್ದರು.

ಅದಾನಿ ಕುಟುಂಬ 1980ರಲ್ಲಿ ವಜ್ರದ ವ್ಯಾಪಾರದ ನಡೆಸಿ ಯಶಸ್ವಿಯಾದ ಬಳಿಕ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿತು. ಬಳಿಕ ಕಲ್ಲಿದ್ದಲು, ಬಂದರು ಉದ್ಯಮದಲ್ಲಿ ತೊಡಗಿಸಿತು. ಉದ್ಯಮಗಳು ಯಶಸ್ವಿಯಾಗುತ್ತಿದ್ದಂತೆ ಪ್ರಸ್ತುತ ಗ್ರೀನ್‌ ಎನರ್ಜಿ, ವಿಮಾನ ನಿಲ್ದಾಣ, ಡಿಜಿಟಲ್‌ ಸರ್ವಿಸ್‌, ಡೇಟಾ ಸೆಂಟರ್‌, ಸಿಮೆಂಟ್‌ ಉತ್ಪಾದನೆ, ಮಾಧ್ಯಮ ಕ್ಷೇತ್ರಕ್ಕೂ ಎಂಟ್ರಿಯಾಗಿದೆ.

Live Tv

Leave a Reply

Your email address will not be published. Required fields are marked *

Back to top button