ಮುಂಬೈ: ಡಿಜಿಟಲೀಕರಣಕ್ಕೆ ಪುಷ್ಠಿ ನೀಡುವ ಮತ್ತೊಂದು ಮಹತ್ವದ ಯೋಜನೆಯನ್ನು ಆರ್‌ಬಿಐ ಶೀಘ್ರದಲ್ಲೇ ಚಾಲ್ತಿಗೆ ತರಲಿದೆ. ಖಾತೆದಾರರು ಎಟಿಎಂಗಳಲ್ಲಿ ಕಾರ್ಡ್‍ಗಳನ್ನು ಬಳಸಿ ಹಣ ಪಡೆಯವ ಸಂಪದ್ರಾಯವಿದೆ. ಅದರ ಬದಲಿಗೆ ಮೊಬೈಲ್‍ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಂಗಳಿಂದಲೂ ಹಣವನ್ನು ಪಡೆಯಬಹುದಾದ ಯೋಜನೆ ಕೆಲವೇ ದಿನಗಳಲ್ಲಿ ಬರಲಿದೆ.
ಡಿಜಿಟಲ್ ಯುಗದಲ್ಲಿ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೇ ಮೊಬೈಲ್ ಮೂಲಕವಾಗಿ ಅಂದರೆ ಗೂಗಲ್ ಪೇ, ಫೋನ್ ಪೇ, ಪೇಟಿಎಂಗಳನ್ನು ಬಳಸಿಕೊಂಡು ಹಣವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಇದೀಗ ನೂತನ ಯೋಜನೆಯನ್ನು ತರುವ ಆಲೋಚನೆಯನ್ನು ಹೊಂದಿದೆ. ಇದರ ಪ್ರಕಾರವಾಗಿ ಎಟಿಎಂಗಳಲ್ಲಿ ಹಣ ಪಡೆಯಲು ಕಾರ್ಡ್‍ಗಳಿಲ್ಲದೇ ಈ ನೂತನ ಆಯ್ಕೆಯನ್ನು ಒದಗಿಸುವಂತೆ ಬ್ಯಾಂಕ್‍ಗಳು ಹಾಗೂ ಎಟಿಎಂ ಆಪರೇಟರ್‌ಗಳನ್ನು ಆರ್‌ಬಿಐ ಕೇಳಿದೆ. ಈಗಾಗಲೇ ಹಲವು ಬ್ಯಾಂಕ್‍ಗಳು ಮೊಬೈಲ್ ಆ್ಯಪ್‍ಗಳನ್ನು ಉಪಯೋಗಿಸಿಕೊಂಡು ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದೇ ಹಣವನ್ನು ಪಡೆಯುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.
Advertisement
Advertisement
ಯಾಕೆ ಕ್ಯೂ ಆರ್ ಕೋಡ್?: ಜಾಗತಿಕ ಚಿಪ್‍ಗಳ ಕೊರತೆಯಿಂದಾಗಿ ಕಾರ್ಡ್ ವಿತರಣೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಅನೇಕ ಬಾರಿ ಕಾರ್ಡ್ ವಿತರಣೆಯು ವಿಳಂಬವಾಗುತ್ತದೆ. ಇದರಿಂದಾಗಿ ಮೊಬೈಲ್ ಫೋನ್‍ಗಳಲ್ಲಿ ಕ್ಯೂ ಆರ್ ಕೋಡ್‍ನ್ನು ಬಳಸುವಾಗ ಕಾರ್ಡ್‍ಗಳನ್ನು ಮರುಪಡೆಯಲು ಸಹಾಯವಾಗುತ್ತದೆ.
Advertisement
Advertisement
ಈ ಹಿಂದೆ ಕಾರ್ಡ್‍ಗಳಲ್ಲಿ ಪಿನ್‍ಕೋಡ್ ಕೋಡ್ ನೀಡದೇ ಎಟಿಎಂ ಮೂಲಕ ಹಣವನ್ನು ಪಡೆಯುವ ಅವಕಾಶವನ್ನು ನೀಡುತ್ತು. ಆದರೆ ಅದು ಅಷ್ಟೊಂದು ಭದ್ರತೆಯನ್ನು ಹೊಂದಿರಲಿಲ್ಲ. ಆದರೆ ನೂತನ ಮೂಬೈಲ್ ಮೂಲಕ ಹಣ ತೆಗೆಯುವ ಆಯ್ಕೆಯು ಹೆಚ್ಚು ಭದ್ರತೆಯನ್ನು ಹೊಂದಿದೆ ಹಾಗೂ ಸುರಕ್ಷತೆಯನ್ನು ಹೊಂದಿದೆ. ಇದನ್ನೂ ಓದಿ: ಜನರ ದುಡ್ಡಲ್ಲಿ ಜನಪ್ರತಿನಿಧಿಗಳ ಜಾತ್ರೆ – ಕಡಿಮೆ ದರದ ಪ್ಲಾನ್ ಇದ್ದರೂ ಸಾವಿರಾರು ರೂ. ಫೋನ್ ಬಿಲ್!
ಕ್ಯೂಆರ್ ಕೋಡ್‍ಗಳ ಮೂಲಕ ಹಣವನ್ನು ಪಡೆಯುವುದರಿಂದ ಡಿಜಿಟಲ್ ಇಂಡಿಯಾಕ್ಕೆ ಮತ್ತೊಂದು ಶಕ್ತಿ ನೀಡಿದಂತಾಗುತ್ತದೆ. ಕ್ಯೂಆರ್ ಸ್ಕ್ಯಾನ್ ಮಾಡಲು ಬ್ಯಾಂಕುಗಳಿಗೆ ಕಷ್ಟದ ಕೆಲಸವಲ್ಲ. ಈಗ ಇರುವ ಸಾಫ್ಟ್‌ವೇರ್ ಅಪ್‍ಡೇಟ್ ಮಾಡಿದರೆ ಸಾಕಾಗುತ್ತದೆ. ಹೀಗಾಗಿ ಶೀಘ್ರವೇ ಇದು ಜಾರಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಎಸ್‍ಬಿಐನಲ್ಲಿ 10 ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡಲು OTP ಅಪ್ಲೈ