Connect with us

Cricket

ಕೊಹ್ಲಿ, ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿಯಲಿದೆ ಟೀಂ ಇಂಡಿಯಾ

Published

on

ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಟೂರ್ನಿಯನ್ನು ಗೆದ್ದು ಹೆಚ್ಚಿನ ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ ಭಾನುವಾರ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಮಾಜಿ ನಾಯಕ ಧೋನಿ, ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಇಂದು ಮೊದಲ ಟಿ20 ಪಂದ್ಯ ನಡೆಯಲಿದ್ದು, ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿರುವುದರಿಂದ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. ಇತ್ತ ವಿಂಡೀಸ್ ತಂಡ ಕೂಡ ಡರೆನ್ ಬ್ರಾವೊ, ಕೀರನ್ ಪೊರ್ಲಾಡ್, ಆ್ಯಂಡ್ರೆ ರಸೆಲ್, ಹೆಟ್ಮೆಯರ್ ರಂತಹ ಟಿ20 ಭರವಸೆ ಆಟಗಾರರ ಹುಮ್ಮಸ್ಸಿನಿಂದ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಇತ್ತ 2014 ರಲ್ಲಿ ಇದೇ ಮೈದಾನದಲ್ಲಿ 264 ರನ್ ಸಿಡಿಸಿ ದಾಖಲೆ ಬರೆದಿದ್ದರು. ಸಾಮಾನ್ಯವಾಗಿ ಈಡನ್ ಗಾರ್ಡನ್ ಫಿಚ್ ಬ್ಯಾಟಿಂಗ್ ಅನುಕೂಲಕಾರವಾಗಿರಲಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಮೊದಲ ಟಿ20 ಪಂದ್ಯಕ್ಕೆ ಬಿಸಿಸಿಐ 12 ಆಟಗಾರರ ತಂಡದ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಕರ್ನಾಟಕದ ಕೆಎಲ್ ರಾಹುಲ್, ಮನೀಷ್ ಪಾಂಡೆ ಸೇರಿದಂತೆ ಧೋನಿ ಸ್ಥಾನದಲ್ಲಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ರಾಹುಲ್ ಮಿಂಚಲು ವಿಫಲರಾಗಿದ್ದರು. ಬಳಿಕ ನಡೆದ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಭಾನುವಾರ ಪಂದ್ಯದಲ್ಲಿ ಇಬ್ಬರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ.

ಟೀಂ ಇಂಡಿಯಾ:
ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್,ರಿಷಬ್ ಪಂತ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ,  ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್,  ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬೂಮ್ರಾ, ಖಲೀಲ್ ಅಹಮದ್.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *