ರೇವಾರಿ: `ಬಾಲಿವುಡ್‍ನ ಸುಲ್ತಾನ್’, `ಭಾಗ್ ಮಿಲ್ಕ ಭಾಗ್’ ಸಿನಿಮಾದಲ್ಲಿ ಬಳಕೆ ಮಾಡಿದ್ದ ಐತಿಹಾಸಿಕ ಅಕ್ಬರ್ ಹೆಸರಿನ ರೈಲು ಪ್ರಯೋಜಿಕ ಸಂಚಾರದ ವೇಳೆ ಚಾಲಕನಿಲ್ಲದೇ 2 ಕಿ.ಮೀ ಸಂಚಾರ ನಡೆಸಿದ ಹಳಿತಪ್ಪಿದ ಘಟನೆ ಹರಿಯಾಣ ದಲ್ಲಿ ನಡೆದಿದೆ.
ಹರಿಯಾಣದ ರೇವಾರಿ ಹೆರಿಟೇಜ್ ಲೋಕೋ ಶೆಡ್‍ನಲ್ಲಿ ಅಕ್ಬರ್ ಹೆಸರಿನ ರೈಲು ಪ್ರಯೋಗಿಕ ಸಂಚಾರವನ್ನು ಏರ್ಪಡಿಸಿದ್ದ ವೇಳೆ ರೈಲಿನ ಬ್ರೇಕ್ ಎಂಜಿನ್ ಬ್ಲಾಕ್ ಆಗಿದೆ. ಇದನ್ನು ಗಮನಿಸಿದ ರೈಲಿನಲ್ಲಿದ್ದ ಇಬ್ಬರು ಲೋಕೋ ಪೈಲಟ್‍ಗಳು ರೈಲಿನಿಂದ ಹೊರ ನೆಗೆದಿದ್ದಾರೆ. ನಂತರ ರೈಲು ಸುಮಾರು 2 ಕಿ.ಮೀ ದೂರ ಸಂಚರಿಸಿ ಹಳಿ ತಪ್ಪಿದೆ ಎಂದು ಮೂಲಗಳು ತಿಳಿಸಿವೆ.
65 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿರುವ ಈ ಐತಿಹಾಸಿಕ ಅಕ್ಬರ್ ಹೆಸರಿನ ರೈಲ್ವೇ ಎಂಜಿನ್ ಅನ್ನು ಬಾಲಿವುಡ್‍ನ `ಸುಲ್ತಾನ್’, `ಭಾಗ್ ಮಿಲ್ಕಾ ಭಾಗ್’, `ರಂಗ್ ದೇ ಬಸಂತಿ’ ಸಿನಿಮಾ ಸೇರಿದಂತೆ 20 ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ಬಳಕೆ ಮಾಡಲಾಗಿದೆ.
ಇದನ್ನೂ ಓದಿ : ರೈಲು ನಿಲ್ಲಿಸಿ ಗಾರ್ಡ್ ನನ್ನು ಹುಡುಕಾಡಿದ ಲೋಕೋಪೈಲಟ್ : ವಿಡಿಯೋ ವೈರಲ್
ಮೂಲಗಳ ಪ್ರಕಾರ ಈ ರೈಲ್ವೇ ಎಂಜಿನ್ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ ತಯಾರಿಸಿದ್ದು, 1965 ರಿಂದ ಸೇವೆ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಚಾಲಕನಿಲ್ಲದೇ 13 ಕಿಮೀ ಸಂಚರಿಸಿದ ರೈಲ್ವೆ ಎಂಜಿನ್-ತಪ್ಪಿದ ಭಾರೀ ದುರಂತ
Haryana: A train engine derailed in Rewari after plying for 2 kilometres without a driver after its brake levers were jammed. The 2 drivers had jumped out of the engine after the levers jammed. pic.twitter.com/80FoR55A2F
— ANI (@ANI) November 12, 2017
Rewari, Haryana: The engine is a 65-years-old steam locomotive engine called Akbar which has featured in more than 20 Bollywood films. pic.twitter.com/lqZbGBkR5E
— ANI (@ANI) November 12, 2017