ನವದೆಹಲಿ: 2003ರ ವಿಶ್ವಕಪ್ ವೇಳೆ ಎಂಎಸ್ ಧೋನಿ ಟೀಂ ಇಂಡಿಯಾದ ಸದಸ್ಯರಾಗಿ ಇರುತ್ತಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತಿತ್ತು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ, ತಮ್ಮ ಜೀವನವನ್ನು ಆಧರಿಸಿ ಬರೆದಿರುವ `ಎ ಸೆಂಚೂರಿ ಈಸ್ ನಾಟ್ ಇನಫ್’ ಪುಸ್ತಕದಲ್ಲಿ ಕ್ರಿಕೆಟ್ ಜೀವನವನ್ನು ಮೆಲುಕು ಹಾಕಿ ಧೋನಿ ಅವರನ್ನು ಹೊಗಳಿದ್ದಾರೆ.
Advertisement
ಒತ್ತಡದ ಸನ್ನಿವೇಶದಲ್ಲಿ ಆಟವಾಡಿ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಟಗಾರರನ್ನು ನಾನು ಕೆಲ ವರ್ಷಗಳಿಂದ ಗಮನಿಸುತ್ತಲೇ ಇದ್ದೇನೆ. 2004ರಲ್ಲಿ ಧೋನಿ ನನ್ನ ಗಮನಕ್ಕೆ ಬಂದರು. ಅವರನ್ನು ನೋಡಿದ ಮೊದಲ ದಿನದಿಂದಲೇ ಅವರ ಆಟಕ್ಕೆ ಆಕರ್ಷಿತನಾದೆ ಎಂದು ಬರೆದಿದ್ದಾರೆ.
Advertisement
Advertisement
ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ 2003ರ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಪಡೆಯ ಬೇಕಾಯಿತು. ಆದರೆ ಅಂದು ಧೋನಿ ನನ್ನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಪಂದ್ಯದ ಫಲಿತಾಂಶ ಬೇರೆಯಾಗಿರುತ್ತಿತ್ತು. ಈ ವೇಳೆ ಧೋನಿ ರೈಲ್ವೇಯ ಟಿಕೆಟ್ ಕಲೆಕ್ಟರ್ ಆಗಿದ್ದರು. ಇದು ನಂಬಲು ಅಸಾಧ್ಯ ಸಂಗತಿ. ಆದರೆ ಈಗ ಅವರ ಸಾಧನೆಯಿಂದ ಗುರುತಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
Advertisement
ಧೋನಿ ಅವರು ಗಂಗೂಲಿ ಅವರ ನಾಯಕತ್ವದಲ್ಲಿ 2004 ರಲ್ಲಿ ಬಾಂಗ್ಲಾ ದೇಶದ ವಿರುದ್ಧದ ಚಿತ್ತಗಾಂಗ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ್ದರು. ಆರಂಭದ ಪಂದ್ಯಗಳಲ್ಲಿ ಧೋನಿ ಆರಂಭಿಕ ಬ್ಯಾಟ್ಸ್ ಮನ್ ಗಳಾಗಿ ಕಣಕ್ಕೆ ಇಳಿಯುತ್ತಿದ್ದರು. ನಂತರ ಧೋನಿ ಅವರು ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಈ ವೇಳೆ ಅವರ ಬ್ಯಾಟಿಂಗ್ ಸ್ಥಾನವನ್ನು ಬದಲಾಯಿಸಿ ಮೂರನೇ ಕ್ರಮಾಂಕದಲ್ಲಿ ಇಳಿಯಲು ಆರಂಭಿಸಿದರು. ಈ ವೇಳೆ ಧೋನಿ ಪಾಕಿಸ್ತಾನದ ವಿರುದ್ಧದ ಏಕದಿನ ಪಂದ್ಯದಲ್ಲಿ ಆಕರ್ಷಕ 148 ರನ್ ಸಿಡಿಸಿ ಶತಕ ಗಳಿಸಿದರು. ಕೆಲ ತಿಂಗಳ ಬಳಿಕ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 183 ರನ್ ಸಿಡಿಸಿದ್ದರು. ಇದನ್ನೂ ಓದಿ: ಕೊಹ್ಲಿಯಂತೆ ಧೋನಿ ಹೆಲ್ಮೆಟ್ ನಲ್ಲಿ ತ್ರಿವರ್ಣ ಧ್ವಜ ಯಾಕಿಲ್ಲ?
ಅನಂತರದಲ್ಲಿ 2007 ರಲ್ಲಿ ನಡೆದ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ತಂಡದ ನಾಯಕತ್ವವನ್ನು ಧೋನಿ ಅವರಿಗೆ ವಹಿಸಲಾಯಿತು. ಯುವ ಆಟಗಾರರನ್ನೇ ಹೊಂದಿದ್ದ ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಪಾಕಿಸ್ತಾನದ ವಿರುದ್ಧದ ಫೈನಲ್ ರೋಚಕ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಶ್ರೇಷ್ಠ ನಾಯಕರಾಗಿ ಹೊರಹೊಮ್ಮಿದರು. ಇದನ್ನೂ ಓದಿ: ಆ ಕಡೆ ಯಾಕೆ ನೋಡ್ತಿದ್ದಿ, ನನ್ನನ್ನು ನೋಡು – ಪಾಂಡೆ ವಿರುದ್ಧ ಕ್ಯಾಪ್ಟನ್ ಕೂಲ್ ಗರಂ
ಮೊದಲ ಟಿ20 ವಿಶ್ವಕಪ್ ನಡೆದ ನಾಲ್ಕು ವರ್ಷಗಳ ನಂತರ ಧೋನಿ 2011ರ ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ನಲ್ಲಿ 78 ಎಸೆತಗಳಲ್ಲಿ 91 ರನ್ ಸಿಡಿಸುವ ಮೂಲಕ ಭಾರತಕ್ಕೆ ಎರಡನೇ ವಿಶ್ವ ಕಪ್ ಗೆಲ್ಲಿಸಿಕೊಟ್ಟು ಇತಿಹಾಸ ನಿರ್ಮಿಸಿದರು. ಆದರೆ ಧೋನಿ ಫೈನಲ್ ಪಂದ್ಯ ಹೊರತು ಪಡಿಸಿ ಸರಣಿಯ ಎಂಟು ಪಂದ್ಯಗಳಲ್ಲಿ ಕ್ರಮವಾಗಿ 31,34,19,12,22,7 ಮತ್ತು 25 ರನ್ ಗಳಿಸಿ ಕೆಟ್ಟ ಫಾರ್ಮ್ ಹೊಂದಿದ್ದರು. ಆದರೆ ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯದಲ್ಲಿ 275 ರನ್ ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಭರ್ಜರಿ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಧೋನಿ ಹಾಗೂ ಗೌತಮ್ ಗಂಭೀರ್ (97) ಜೋಡಿ ನಾಲ್ಕನೇ ವಿಕೆಟ್ ಗೆ 109 ರನ್ ಕಾಣಿಕೆ ನೀಡಿದ್ದರು.
2013 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಧೋನಿ ಸಾರಥ್ಯದಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿತ್ತು. ಇದರೊಂದಿಗೆ ಧೋನಿ ತಮ್ಮ ವೃತ್ತಿ ಜೀವನದಲ್ಲಿ ಐಸಿಸಿ ನಡೆಸುವ ಎಲ್ಲಾ ಟ್ರೋಫಿ ಗಳನ್ನು ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಪಡೆದಿದ್ದಾರೆ. ಇದನ್ನೂ ಓದಿ: ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ