ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಕ್ಯಾಚ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಒಟ್ಟು 134 ಕ್ಯಾಚ್ ಪಡೆಯುವ ಮೂಲಕ ಟಿ20ಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. 275 ಪಂದ್ಯದಲ್ಲಿ ಧೋನಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಹೆಂಡ್ರಿಕ್ಸ್ ಕ್ಯಾಚ್ ಪಡೆಯುವ ಮೂಲಕ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
Advertisement
ಸಂಗಕ್ಕಾರ ಅವರು 254 ಪಂದ್ಯಗಳಿಂದ 133 ಕ್ಯಾಚ್ ಪಡೆದಿದ್ದರೆ, ದಿನೇಶ್ ಕಾರ್ತಿಕ್ 227 ಪಂದ್ಯಗಳಿಂದ 123 ಕ್ಯಾಚ್ ಪಡೆದಿದ್ದಾರೆ. ಪಾಕಿಸ್ತಾನದ ಕಮ್ರಾನ್ ಅಕ್ಮಲ್ 211 ಪಂದ್ಯಗಳಿಂದ 115 ಕ್ಯಾಚ್ ಪಡೆದಿದ್ದರೆ, ವೆಸ್ಟ್ ಇಂಡೀಸ್ ನ ದಿನೇಶ್ ರಾಮ್‍ದಿನ್ 168 ಪಂದ್ಯಗಳಿಂದ 108 ಕ್ಯಾಚ್ ಪಡೆದಿದ್ದಾರೆ.
Advertisement
ಎಲ್ಲ ಮಾದರಿಯ ಕ್ರಿಕೆಟ್ ನ ಒಟ್ಟು 495 ಪಂದ್ಯಗಳಲ್ಲಿ 775 ಬಲಿಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಜನರನ್ನು ಔಟ್ ಮಾಡಿದ ಮೂರನೇ ವಿಕೆಟ್ ಕೀಪರ್ ಧೋನಿ ಆಗಿದ್ದಾರೆ. ಇದನ್ನೂ ಓದಿ: ಕೊಹ್ಲಿ 35ನೇ ಶತಕದೊಂದಿಗೆ ಒಂದೇ ಪಂದ್ಯದಲ್ಲಿ ಮೂರು ವಿಶ್ವ ದಾಖಲೆ!