ಚಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ. ಈ ಸಮಸ್ಯೆಗಾಗಿ ಕೆಲವು ಟಿಪ್ಸ್ ಈ ಕೆಳಗಿನಂತೆ ನೀಡಲಾಗಿದೆ.
Advertisement
ತುಟಿ ಒಡೆಯುವುದು, ಪಾದಗಳು ಬಿರುಕು ಬಿಡುವುದು, ಕೂದಲು ಉದುರುವುದು ಸರ್ವಸಾಮಾನ್ಯವಾಗಿದೆ. ಹಲವರಿಗೆ ಚಳಿಗಾಗಲದಲ್ಲಿ ಈ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಕೆ ಮಾಡಿರುತ್ತೀರ. ಆದರೆ ನೀವೆ ಮನೆಯಲ್ಲಿ ನಿಮ್ಮನ್ನು ನೀವು ಚಳಿಗಾಲದಲ್ಲಿ ಆರೈಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್
Advertisement
Advertisement
* ನೀರು, ಹೆಚ್ಚು ಹೆಚ್ಚು ಕುಡಿಯುವುದರಿಂದ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಜ್ಯೂಸ್, ಬಿಸಿ ಸೂಪ್‍ಗಳನ್ನು ಆಗಾಗ ಕುಡಿಯುತ್ತಿರಬೇಕು.
* ಪೌಷ್ಟಿಕಾಂಶಕ್ಕಾಗಿ ಪಾಲಕ, ಕ್ಯಾರೆಟ್ ಮತ್ತು ಬೀನ್ಸ್‌ನಂತಹ ಕ್ಯಾಲೋರಿಭರಿತ ತರಕಾರಿಗಳನ್ನು ಸೇವಿಸಿ. ಪಾಲಕ್ ನಂತಹ ಹಸಿರು ತರಕಾರಿಗಳಲ್ಲಿ ನೀರಿನಂಶ ಸಮೃದ್ಧವಾಗಿವೆ. ಆದ್ದರಿಂದ, ಹೆಚ್ಚು ಹಸಿರು ತರಕಾರಿಗಳನ್ನು ತಿನ್ನುವುದು ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ
Advertisement
* ಚಳಿಗಾದಲ್ಲಿ ಸ್ನಾನ ಮಾಡುವಾಗ ಸೋಪ್ ಬಳಸುವ ಬದಲಾಗಿ ಕಡಲೆ ಹಿಟ್ಟನ್ನು ಬಳಸಬಹುದಾಗಿದೆ.
* ಅರಿಶಿಣ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖ ಮತ್ತು ಕೈ, ಕಾಲಗಳಿಗೆ ಹಚ್ಚಿ ತಣ್ಣಗಿನ ನೀರಿನಲ್ಲಿ ತೊಳೆಯುವುದರಿಂದ ಚರ್ಮದ ಆರೈಕೆ ಮಾಡಬಹುದಾಗಿದೆ.
* ಹೆಚ್ಚಿನವರಲ್ಲಿ ಪಾದಗಳಲ್ಲಿ ಬಿರುಕು ಕಾಣಿಕೊಳ್ಳುತ್ತದೆ. ಹೀಗಾಗಿ ಅಂತಹವರು ರಾತ್ರಿ ಮಲಗುವಾಗ ಮತ್ತು ಹೊರಗೆ ಹೊಗುವ ವೇಳೆ ಸಾಕ್ಸ್ ಧರಿಸುವುದನ್ನು ರೂಢಿಮಾಡಿಕೊಳ್ಳುವುದು ಉತ್ತಮವಾಗಿದೆ.
* ಎಣ್ಣೆ ಚರ್ಮವನ್ನು ಹೊಂದಿದವರು ರೋಸ್ ವಾಟರ್, ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.
* ತುಟಿ ಒಡೆಯುವುದು, ಒರಟಾಗುವಂತಿದ್ದರೆ ನೀವು ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ, ಹಾಲಿನಕೆನೆಯನ್ನು ಹಚ್ಚಿ ಮಲಗುವ ಅಭ್ಯಾಸವನ್ನು ಚಳಿಗಾಲದಲ್ಲಿ ಮಾಡಿಕೊಳ್ಳಬೇಕು.
* ಕೂದಲು ಉದುರುವ ಸಮಸ್ಯೆ ಚಳಿಗಾಗಲದಲ್ಲಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ನೀವು ಕೊಬ್ಬರಿ ಎಣ್ಣೆ, ಹರಳೆಣ್ಣೆಯನ್ನು ತುಸು ಬಿಸಿಮಾಡಿಕೊಂಡು ಹಚ್ಚುವುದು ಒಳ್ಳೆಯದಾಗಿದೆ.
* ಉಣ್ಣೆಯ ಬಟ್ಟೆಯನ್ನು ಧರಿಸುವುದು, ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವುದರಿಂದ ಚಳಿಯಿಂದ ದೇಹವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
* ಸ್ವೆಟರ್, ಸ್ಕಾರ್ಪ್, ಸಾಕ್ಸ್ ಚಳಿಗಾಲದಲ್ಲಿ ಬಳಕೆ ಮಾಡುವುದು ಉತ್ತಮವಾಗಿದೆ.
* ಚಳಿಗಾಲದಲ್ಲಿ ತೈಲ ಆಧಾರಿತ ಮಾಯಿಶ್ಚರೈಸ್‍ಗಳಾದ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯಂತಹ ನೈಸರ್ಗಿಕ ತೈಲಗಳು ನಿಮ್ಮ ಚರ್ಮವನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ.