ಇತ್ತೀಚಿನ ದಿನಗಳಲ್ಲಿ ಮಳೆಗಾಲ, ಚಳಿಗಾಲ (Winter) ಬಂತೆಂದರೆ ಸಾಕು ಯುವಕರಿಂದ ವಯಸ್ಸಾದವರವರೆಗೂ ಕೀಲು ನೋವು, ಮೂಳೆ ನೋವುಗಳು (Bones And Joints) ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಕೆಲವು ಆಧುನಿಕ ಶೈಲಿಯ ಆಹಾರ ಪದ್ಧತಿಯೂ ಕಾರಣವಾಗುತ್ತದೆ. ಈ ಕೀಲು ನೋವು, ಮೂಳೆ ನೋವಿನಿಂದ ಮುಕ್ತಿ ಪಡೆಯಲು ಕೆಲವನ್ನು ಸೇವಿಸುವುದು ಅಗತ್ಯವಿದೆ.
ಹಾಲು, ಮೊಸರು, ಚೀಸ್: ಇವುಗಳಲ್ಲವೂ ಕ್ಯಾಲ್ಸಿಯಂನ ಮೂಲವಾಗಿದೆ. ಮೊಸರು, ಚೀಸ್ ಹಾಗೂ ಹಾಲಿನ (Milk) ಪದಾರ್ಥಗಳನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ. ಇದರಿಂದಾಗಿ ಕೀಲು ನೋವು, ಮೂಳೆ ನೋವನ್ನು ತಡೆಗಟ್ಟಬಹುದು.
Advertisement
Advertisement
ಮೀನು: ದೈನಂದಿನವಾಗಿ ಮೀನು ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚುತ್ತದೆ. ಇದರಿಂದಾಗಿ ಕೀಲು ನೋವು ಹಾಗೂ ಮೂಳೆ ನೋವು ಕಡಿಮೆ ಆಗುತ್ತದೆ. ಜೊತೆಗೆ ಮೆದುಳು ಹಾಗೂ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
Advertisement
Advertisement
ಸೊಪ್ಪನ್ನು ಹೆಚ್ಚಾಗಿ ಸೇವಿಸಿ: ಕೋಸುಗಡ್ಡೆ, ಬಸಳೆ, ಪಾಲಕ್‍ನಂತಹ ಸೊಪ್ಪನ್ನು ಹೆಚ್ಚಾಗಿ ಸೇವಿಸಿ. ಇದು ಕ್ಯಾಲ್ಸಿಯಂ ಅನ್ನು ಒದಗಿಸುತ್ತವೆ.
ಅರಿಶಿನ: ಅರಿಶಿನವನ್ನು ಸರ್ವರೋಗಕ್ಕೂ ರಾಮಬಾಣ ಎಂದು ಕರೆಯುತ್ತಾರೆ. ಇದರಲ್ಲಿರುವ ಕರ್ಕ್ಯುಮಿನ್ ಎಂಬ ನೈಸರ್ಗಿಕ ರಾಸಾಯನಿಕ ಶಕ್ತಿಯು ಮೂಳೆಗಳ ನೋವು ಹಾಗೂ ಕೀಲು ನೋವನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಯು ಕೀಲು ನೋವು ನಿವಾರಣೆ ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳು ಅಪಾರ ಪ್ರಮಾಣದಲ್ಲಿ ಇದೆ. ಹೀಗಾಗಿ ಚಳಿಗಾಲದಲ್ಲಿ ಎದುರಾಗುವ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು. ಇದನ್ನೂ ಓದಿ: ಸ್ಪ್ಲಿಟ್ ಹೇರ್ ಕೊನೆಗೊಳಿಸಲು ಇಲ್ಲಿದೆ ಕೆಲವು ಮುಂಜಾಗ್ರತಾ ಕ್ರಮಗಳು
ಶುಂಠಿ: ಹಲವಾರು ರೋಗಗಳಿಗೆ ಮನೆಮದ್ದು ಎನಿಸಿರುವ ಶುಂಠಿಯು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ವಿಶೇಷವಾಗಿ ಮಳೆಗಾಲದ ಹಾಗೂ ಚಳಿಗಾಲದ ಸಮಯದಲ್ಲಿ ಅನೇಕ ರೋಗಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು
ವಾಲ್ ನಟ್: ಡ್ರೈಫ್ರೂಟ್ಸ್‌ಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಅದರಲ್ಲೂ ವಿಶೇಷವಾಗಿ ವಾಲ್‍ನಟ್ ಸೇವನೆಯಿಂದ ಕೀಲು ನೋವಿನಿಂದ ಮುಕ್ತಿ ಪಡೆಯಬಹುದಾಗಿದೆ. ಇದರಲ್ಲಿರುವ 3 ಫ್ಯಾಟಿ ಆಮ್ಲಗಳು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k