ದುಬೈ: ಆಸ್ಟ್ರೇಲಿಯಾದಲ್ಲಿ (Australia) ನಡೆಯಲಿರುವ ಟಿ20 ವಿಶ್ವಕಪ್ (T20 World Cup) ಟ್ರೋಫಿ ಜೊತೆಗೆ ಪ್ರಥಮ ಸ್ಥಾನ ಪಡೆದ ತಂಡಕ್ಕೆ ನಗದು ಮೊತ್ತದ ಬಹುಮಾನದ ಕುರಿತಾಗಿ ಐಸಿಸಿ (ICC) ಇಂದು ತಿಳಿಸಿದೆ.
Advertisement
ಈ ಬಗ್ಗೆ ಇಂದು ಮಾಧ್ಯಮಗೋಷ್ಠಿ ನಡೆಸಿ ತಿಳಿಸಿರುವ ಐಸಿಸಿ, ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ನಗದು ಬಹುಮಾನವಾಗಿ 1.6 ಮಿಲಿಯನ್ ಡಾಲರ್ (13.2 ಕೋಟಿ ರೂ.) ನೀಡಲಾಗುವುದು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 0.8 ಮಿಲಿಯನ್ (6 ಕೋಟಿ ರೂ.) ಸಿಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾದಿಂದ ಬುಮ್ರಾ ಔಟ್ ಸಿರಾಜ್ ಇನ್
Advertisement
Advertisement
ಈ ಬಾರಿಯ ಟಿ20 ವಿಶ್ವಕಪ್‍ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, ಸೆಮಿಫೈನಲ್‍ನಲ್ಲಿ ಸೋತ ತಂಡಕ್ಕೆ 400,000 ಡಾಲರ್ (3 ಕೋಟಿ ರೂ.) ನೀಡಲಿದೆ. ಸೂಪರ್ 12 ಹಂತಕ್ಕೇರಿದ ತಂಡಕ್ಕೆ 70,000 ಡಾಲರ್ (56 ಲಕ್ಷ) ನಗದು ಪ್ರಶಸ್ತಿ ಘೋಷಿಸಿದೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಸೂರ್ಯನದ್ದೇ ಪವರ್ – ಧೋನಿ, ಕೊಹ್ಲಿ ಸಾಲಿನಲ್ಲಿ ಮಿಂಚಲು ರೆಡಿ
Advertisement
ಐಸಿಸಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದ್ದು, ಅಕ್ಟೋಬರ್ 16 ರಿಂದ ನವೆಂಬರ್ 13ರವರೆಗೆ ಚುಟುಕು ಸಮರ ನಡೆಯಲಿದ್ದು, ಈಗಾಗಲೇ ಎಲ್ಲಾ ದೇಶಗಳು ತಮ್ಮ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದೆ.