ಶಿವಮೊಗ್ಗ: ಈ ಬಾರಿ ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ದೆಹಲಿಗೆ ಕರೆದುಕೊಂಡು ಬರುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರು ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಭರವಸೆ ನೀಡಿದ್ದಾರೆ.
Advertisement
ಶಿವಮೊಗ್ಗದ (Shivamogga) ಅಲ್ಲಮಪ್ರಭು ಫ್ರೀಡಂ ಪಾರ್ಕ್ ಆವರಣದಲ್ಲಿ ಆಯೋಜನೆಗೊಂಡಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಮೋದಿ ಅವರು ಕೈಗೊಂಡ ನಿರ್ಧಾರಗಳಿಗೆ ಕೈಜೋಡಿಸಿದ್ದೇವೆ. ಹಾಗಾಗಿ ಈ ಬಾರಿ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನ (BJP Candidates) ಗೆಲ್ಲಿಸಿ, ದೆಹಲಿಗೆ ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: Mandya Lok Sabha 2024: ಸಕ್ಕರೆ ನಾಡಿನ ಜನ ಸಿಹಿ ತಿನ್ನಿಸೋದು ಯಾರಿಗೆ?
Advertisement
Advertisement
ಕರ್ನಾಟಕದಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದೆ. ಮೋದಿ ಸರ್ಕಾರ ಚುನಾವಣೆಗೆ ಕೆಲಸ ಮಾಡುವ ಸರ್ಕಾರವಲ್ಲ. ದಿನದ 24 ಗಂಟೆ ವರ್ಷದ 365 ದಿನ ಕೆಲಸ ಮಾಡುವ ಸರ್ಕಾರ. ರೈತರ ಖಾತೆಗೆ ಹಣ ಹಾಕುವ ಮೂಲಕ ಮಂದಹಾಸ ತರುವ ಕೆಲಸ ಮಾಡಿದೆ. ಕಾಶ್ಮೀರದ ಸ್ವಾಯತತ್ತೆಯ ಕನಸಾಗಿದ್ದ ಆರ್ಟಿಕಲ್ 370 (Article 370) ರದ್ದು ಮಾಡಿದ್ದಾರೆ. ಕೋವಿಡ್ ನಂತರ ವಿಶ್ವದ ಅನೇಕ ರಾಷ್ಟ್ರ ಆರ್ಥಿಕವಾಗಿ ಹಿಂದುಳಿದ್ದರೂ, ಭಾರತ ವಿಶ್ವದ ಬಲಿಷ್ಠ ಆರ್ಥಿಕ ದೇಶವಾಗಿ ಬೆಳೆಯುವಂತೆ ಮಾಡಿದ್ದಾರೆ ಎಂದು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ನೀವು ಅರಮನೆಗೆ ಬರಬೇಕಿಲ್ಲ, ನಾನೇ ಹೊರಗೆ ಬರ್ತೀನಿ, ಸಾಮಾನ್ಯನಂತೆ ಕೆಲಸ ಮಾಡ್ತೀನಿ: ಯದುವೀರ್
Advertisement
ಮುಂದಿನ ದಿನಗಳಲ್ಲಿ ಭಾರತ ಮೋದಿ ಅವರ ನೇತೃತ್ವದಲ್ಲಿ ಆರ್ಥಿಕವಾಗಿ 3ನೇ ರಾಷ್ಟ್ರ ಆಗಲಿದೆ. ಮೋದಿ ಅವರು ಒಂದೇ ಒಂದು ದಿನ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಮಲೆನಾಡು ಭಾಗದಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಹೆಚ್.ಡಿ ದೇವೇಗೌಡರೂ ದೂರವಾಣಿ ಮೂಲಕ ಮಾತನಾಡಿದ್ದಾರೆ, ನಾನು ಶಿವಮೊಗ್ಗಕ್ಕೆ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದಾರೆ ಎಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಪಕ್ಷಕ್ಕಾಗಿ ನೀವೂ ನ್ಯಾಯಾಲಯದಲ್ಲಿಲ್ಲ, ಮಾ.21ರ ಒಳಗಡೆ ಎಲ್ಲ ದಾಖಲೆ ಬಿಡುಗಡೆಗೆ ಸೂಚನೆ – ಎಸ್‌ಬಿಐ ವಿರುದ್ಧ ಸುಪ್ರೀಂ ಕೆಂಡ