ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮರಳಿ ಪಡೆದ ಬಳಿಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಬಾರಿ ಐಪಿಎಲ್‍ನಲ್ಲಿ ನೂತನ ಜವಾಬ್ದಾರಿಯ ಮೂಲಕ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.
Advertisement
ನಿನ್ನೆ ಪುಣೆಯಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮೊದಲು ವೀಕ್ಷಕ ವಿವರಣೆಗಾರ ಡ್ಯಾನಿ ಮಾರಿಸನ್, ಧೋನಿ ನೀವು ಮುಂದಿನ ಬಾರಿ ಐಪಿಎಲ್‍ನಲ್ಲಿ ಹಳದಿ ಜೆರ್ಸಿಯಲ್ಲಿ ಕಾಣಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಧೋನಿ ಖಂಡಿತ ನಾನು ಮುಂದಿನ ಬಾರಿಯೂ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಎಂದರು. ಇದನ್ನೂ ಓದಿ: ಧೋನಿಯಿಂದ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್
Advertisement
Advertisement
ಮಾತು ಮುಂದುವರಿಸಿದ ಧೋನಿ ಮುಂದಿನ ಬಾರಿಯ ಐಪಿಎಲ್‍ನಲ್ಲಿ ಖಂಡಿತವಾಗಿಯೂ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡಲಿದ್ದೀರಿ. ಆದರೆ ಈ ಹಳದಿ ಜೆರ್ಸಿಯಲ್ಲೋ ಅಥವಾ ಬೇರೆ ಹಳದಿ ಜೆರ್ಸಿಯಲ್ಲೋ ಗೊತ್ತಿಲ್ಲ ಎಂದು ದ್ವಂದ್ವ ಹೇಳಿಕೆ ನೀಡಿದರು. ಇದನ್ನೂ ಓದಿ: ಅಂಪೈರ್ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು
Advertisement
ಈ ಮೂಲಕ ಧೋನಿ ಮುಂದಿನ ಐಪಿಎಲ್ ವೇಳೆ ಸಿಎಸ್‍ಕೆ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುವ ಸುಳಿವನ್ನು ನೀಡಿದ್ದಾರೆ. ಆದರೆ ಧೋನಿ ಎಂದರೇ ಅಚ್ಚರಿ ನಿರ್ಧಾರಗಳಿಗೆ ಹೆಸರುವಾಸಿಯಾದವರು. ಹಾಗಾಗಿ ಧೋನಿ ಮುಂದಿನ ಬಾರಿಯ ಐಪಿಎಲ್‍ನಲ್ಲಿ ಆಟಗಾರನಾಗಿಯೂ ಆಡಬಹುದು ಅಥವಾ ಸಹಾಯಕ ಕೋಚ್ ಆಗಿಯೂ ತಂಡದಲ್ಲಿ ಕಾಣಿಸಿಕೊಳ್ಳಬಹುದು ಧೋನಿ ನಿರ್ಧಾರದ ಮೇಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!
15ನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ತಮ್ಮ ಬದಲು ಮೊದಲನೇ ಆಯ್ಕೆಯಾಗಿ ರವೀಂದ್ರ ಜಡೇಜಾರನ್ನು ರಿಟೈನ್ ಮಾಡಿಕೊಳ್ಳುವಂತೆ ಧೋನಿ ಚೆನ್ನೈ ತಂಡಕ್ಕೆ ಸಲಹೆ ನೀಡಿದ್ದರು. ಆ ಬಳಿಕ ಟೂರ್ನಿ ಆರಂಭಕ್ಕೂ ಮೊದಲು ನಾಯಕತ್ವ ತ್ಯಜಿಸಿ ಜಡೇಜಾಗೆ ಪಟ್ಟ ಕಟ್ಟಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡು ಚೆನ್ನೈ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಈ ಮೂಲಕ ಧೋನಿ ತಮ್ಮ ಅಚ್ಚರಿಯ ನಿರ್ಧಾರಗಳ ಸರಣಿಯನ್ನು ಮುಂದುವರಿಸಿದ್ದಾರೆ.