CinemaLatestMain PostSouth cinema

`ವಿಕ್ರಮ್’ ನಿರ್ದೇಶಕನ ಸಿನಿಮಾದಲ್ಲಿ ಜ್ಯೂ.ಮೆಗಾಸ್ಟಾರ್!

ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ಷಣ್ಮಗಂ ನಿರ್ದೇಶನದ `ಆರ್ 15′ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಬೆನ್ನಲ್ಲೇ `ವಿಕ್ರಮ್’ ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.

`ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ರಾಮ್‌ಚರಣ್ ಲಿಸ್ಟ್‌ನಲ್ಲಿ ಕೈತುಂಬಾ ಸಿನಿಮಾಗಳಿವೆ. ಇದೀಗ ವಿಕ್ರಮ್ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ರಾಮ್‌ಚರಣ್‌ಗಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಭೇಟಿಯಾಗಿ ಒನ್‌ಲೈನ್ ಕಥೆ ಹೇಳಿದ್ದು, ರಾಮ್‌ಚರಣ್ ಕಂಟೆಂಟ್ ಇಷ್ಟವಾಗಿದೆ. ಇದನ್ನೂ ಓದಿ: ಅರ್ಜುನ್ ಕಪೂರ್ -ಮಲೈಕಾ ಅರೋರಾ ಮ್ಯಾರೇಜ್ ಡೇಟ್ ಫಿಕ್ಸ್

ಸದ್ಯ ಶಂಕರ್ ಷಣ್ಮಗಂ ನಿರ್ದೇಶನದ `ಆರ್ 15′ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ಇದಾದ ಬಳಿಕ `ಜೆರ್ಸಿ’ ನಿರ್ದೇಶಕ ಗೌತಮ್ ಸಿನಿಮಾಗೆ ಸಹಿ ಹಾಕಿದ್ದಾರೆ. ಇತ್ತ ಲೋಕೇಶ್ ಕನಗರಾಜ್ ಲಿಸ್ಟ್‌ನಲ್ಲಿ ಸಾಕಷ್ಟು ಚಿತ್ರಗಳಿವೆ. ಇವೆಲ್ಲಾ ಚಿತ್ರಗಳ ಮಧ್ಯೆ ಲೋಕೇಶ್ ಮತ್ತು ರಾಮ್ ಚರಣ್ ಕಾಂಬಿನೇಷನ್ ಚಿತ್ರ ಮೂಡಿ ಬರಲಿದೆಯಂತೆ. ಒಟ್ನಲ್ಲಿ ರಾಮ್ ಚರಣ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

Leave a Reply

Your email address will not be published.

Back to top button