– ಮೋದಿ ಕಾಲಘಟ್ಟದಲ್ಲಿ ಅವಕಾಶ ಸಿಕ್ಕಿರೋದು ಜನ್ಮ-ಜನ್ಮಗಳ ಸೌಭಾಗ್ಯ
– ಬಿಜೆಪಿ-ಜೆಡಿಎಸ್ ಹಾಲು, ಜೇನಿನಂತೆ ಬೆರೆತು ಕೆಲಸ ಮಾಡ್ತೀವಿ ಎಂದ ಸುಧಾಕರ್
ಬೆಂಗಳೂರು: ನನ್ನ ಕ್ಷೇತ್ರವನ್ನು ವಿಶ್ವದಲ್ಲೇ ಮಾದರಿ ಕ್ಷೇತ್ರ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ (Chikkaballapura) ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ ಸುಧಾಕರ್ (Dr.K Sudhakar) ಹೇಳಿದ್ದಾರೆ.
Advertisement
ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅವರು, ಮಾಜಿ ಸಿಎಂ ಕುಮಾರಸ್ವಾಮಿಯವರನ್ನು (H.D Kumaraswamy) ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ (BJP) ಹೈಕಮಾಂಡ್ ನಾಯಕರು, ಮೋದಿ, ಯಡಿಯೂರಪ್ಪ, ಬೊಮ್ಮಾಯಿ, ವಿಜಯೇಂದ್ರ, ಕುಮಾರಸ್ವಾಮಿಯವರ ಸಹಕಾರದಿಂದ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇನೆ. ಎಲ್ಲರಿಗೂ ಹೃದಯ ಪೂರ್ವಕವಾಗಿ ಕೃತಜ್ಞತೆ ಹೇಳುತ್ತೇನೆ. ಮಾಜಿ ಶಾಸಕರಾದ ಎಂಟಿಬಿ ನಾಗರಾಜ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಜೆಡಿಎಸ್ ಮುಖಂಡರೆಲ್ಲರೂ ಆಶೀರ್ವಾದ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಮಾದರಿ ಲೋಕಸಭಾ ಕ್ಷೇತ್ರವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೋದಿಯವರ ಕಾಲಘಟ್ಟದಲ್ಲಿ ನನಗೆ ಅವಕಾಶ ಸಿಕ್ಕಿರುವುದು ಜನ್ಮ ಜನ್ಮಗಳ ಸೌಭಾಗ್ಯ ಎಂದಿದ್ದಾರೆ. ಇದನ್ನೂ ಓದಿ: ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ‘ಮಂಡಿ’ ಅಖಾಡದಲ್ಲಿ ಕಂಗನಾ
Advertisement
Advertisement
ಹಾಲು-ಜೇನಿನಂತೆ ಬೆರೆತು ಕೆಲಸ ಮಾಡ್ತೀವಿ:
ನಮ್ಮ ಕ್ಷೇತ್ರದಲ್ಲಿ 20 ಲಕ್ಷ ಮತದಾರರಿದ್ದಾರೆ. ಅವರಿಗೆ ಮನವಿ ಮಾಡ್ತೀನಿ. ನನ್ನ ಅವಧಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ನೋಡಿ. ಈ ಅಭಿವೃದ್ಧಿಯನ್ನ ಇಡೀ ಲೋಕಸಭಾ ಕ್ಷೇತ್ರಕ್ಕೆ ವಿಸ್ತರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ಸ್ವಾಭಾವಿಕ ಮೈತ್ರಿಯಾಗಿದ್ದು, ಎರಡೂ ಪಕ್ಷಗಳ ನಡುವೆ ಯಾವತ್ತೂ ವೈರತ್ವ ಇರುವ ಪಕ್ಷಗಳಲ್ಲ. ಸ್ಥಳೀಯ ಕಾರ್ಯಕರ್ತರು, ನಾಯಕರಿಗೆ ಒಟ್ಟಾಗಿ ಕೆಲಸ ಮಾಡ್ತಾರೆ. ಇದು ಸ್ವಾಭಾವಿಕ ಮೈತ್ರಿ. ಇಡೀ ರಾಜ್ಯದಲ್ಲಿ ಹಾಲು ಜೇನಿನಂತೆ ಬೆರತು ಬಿಜೆಪಿ-ಜೆಡಿಎಸ್ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತೇವೆ. ಒಳ್ಳೆಯ ಫಲಿತಾಂಶಕ್ಕಾಗಿ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಲು ಜನ ಮತ ನೀಡಲಿದ್ದಾರೆ ಎಂದು ಹೇಳಿದ್ದಾರೆ.
Advertisement
ವಿಶ್ವನಾಥ್ ಭದ್ರ ಕೋಟೆ ಕಟ್ಟಿದ್ದಾರೆ:
ಶಾಸಕ ಎಸ್.ಆರ್ ವಿಶ್ವನಾಥ್ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ವಿಶ್ವನಾಥ್ ಅವರ ಜೊತೆ ಮಾತನಾಡುತ್ತೇನೆ. ಅವರು ಹಿರಿಯರು, ಅವರ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಭದ್ರಕೋಟೆ ಕಟ್ಟಿದ್ದಾರೆ. ನಾವಿಬ್ಬರು ಮೊದಲೇ ಮಾತಾಡಿಕೊಂಡಿದ್ದೇವೆ. ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗೆ ಕೆಲಸ ಮಾಡಬೇಕು. ಹೊರಗಡೆಯವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಚರ್ಚಿಸಿದ್ದೆವು. ಅದಕ್ಕೆ ಹೈಕಮಾಂಡ್ ಮನ್ನಣೆ ಕೊಟ್ಟಿದೆ. ವಿಶ್ವನಾಥ್ ಪ್ರಬಲ ನಾಯಕರು. ಅವರ ಪಡೆ ಸಂಘಟನೆ ಉತ್ತಮವಾಗಿದೆ. ಪಕ್ಷಕ್ಕೆ ಪೂರಕವಾಗಿ ಅವರ ನಿರ್ಣಯ ಇರಲಿದೆ. ಅವರು ಪಕ್ಷದ ಪರ ಇದ್ದು, ನನಗೆ ಸಹಕಾರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಸಕ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆ