ಪ್ರದರ್ಶನ ನಿಲ್ಲಿಸಲಿದೆಯಾ ಮೈಸೂರು ಒಲಂಪಿಯಾ ಥಿಯೇಟರ್

Public TV
1 Min Read
olympia theatre mysore 3

ಮೈಸೂರಿನ ಹಳೆಯ ಚಿತ್ರಮಂದಿರವೊಂದು ಪ್ರದರ್ಶನ ನಿಲ್ಲಿಸುವ ಮೂಲಕ ನೋಡುಗರನ್ನು ಭಾವುಕ ದಂಡೆಗೆ ನಿಲ್ಲಿಸಿದೆ. ಮೈಸೂರಿನ ಗಾಂಧಿ ವೃತ್ತದ ಬಳಿ ಇರುವ ಈ ಒಲಂಪಿಯಾ ಚಿತ್ರಮಂದಿರವು ಸತತ 73 ವರ್ಷಗಳ ಕಾಲ ಪ್ರದರ್ಶನ ಮಾಡಿ, ಇದೀಗ ಇತಿಹಾಸದ ಪುಟ ಸೇರುತ್ತಿದೆ. ಈ ಮೂಲಕ ಮೈಸೂರಿನ ಮತ್ತೊಂದು ಚಿತ್ರಮಂದಿರ ಬಂದ್ ಆಗಲಿದೆ. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

olympia theatre mysore 4

ಪ್ರೇಕ್ಷಕರ ಕೊರತೆ ಮತ್ತು ಕೋವಿಡ್ ಕಾರಣದಿಂದಾಗಿ ತಮ್ಮ ಸಿನಿಮಾ ಮಂದಿರವನ್ನು ಮುಚ್ಚುತ್ತಿರುವುದಾಗಿ ಮಾಲೀಕರು ಹೇಳಿದ್ದು ಸುದ್ದಿಯಾಗಿದೆ. ಕೊರೊನಾ ನಂತರ ಕರ್ನಾಟಕದ ಅನೇಕ ಚಿತ್ರಮಂದಿರಗಳು ಬಾಗಿಲು ಹಾಕಿದ್ದು, ಚಿತ್ರ ವಿತರಕರಿಗೆ ಇದು ಭಾರೀ ತಲೆನೋವಾಗಿ ಪರಿಣಮಿಸಿದೆ. ಕೊರೊನಾ ಮತ್ತು ಪ್ರೇಕ್ಷಕರ ಕೊರೆಯಿಂದಾಗಿ ನಷ್ಟ ಮಾಡಿಕೊಳ್ಳುವುದಕ್ಕಿಂತ ಥಿಯೇಟರ್ ಮುಚ್ಚುವುದೇ ಸರಿಯಾದದ್ದು ಎಂದಿದ್ದಾರಂತೆ ಮಾಲೀಕರು. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

olympia theatre mysore 1

ಮೈಸೂರಿನಲ್ಲಿ 25ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು. ಇತ್ತೀಚೆಗಷ್ಟೇ ಮೈಸೂರಿನ ಪ್ರಖ್ಯಾತ ಚಿತ್ರಮಂದಿರಗಳಾದ ಶಾಂತಲಾ, ಲಕ್ಷ್ಮೀ ಮತ್ತು ಸರಸ್ವತಿ ಥಿಯೇಟರ್ಸ್ ಕೂಡ ಮುಚ್ಚಿವೆ. ಸದ್ಯ ಮೈಸೂರಿನಲ್ಲಿ ಉಳಿದಿರುವ ಥಿಯೇಟರ್ ಸಂಖ್ಯೆ ಕೇವಲ ಹತ್ತು ಮಾತ್ರ ಎನ್ನಲಾಗುತ್ತಿದೆ. ಪ್ರಮುಖ ಚಿತ್ರಮಂದಿರಗಳಲ್ಲಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಹಾಕಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಚಿತ್ರ ನಿರ್ಮಾಪಕರಿಗೆ ಆತಂಕ ಶುರುವಾಗಿದೆ.  ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

olympia theatre mysore 3

ಮೈಸೂರು ಭಾಗದಲ್ಲಿ ಅತೀ ಹೆಚ್ಚು ಹಣ ತಂದು ಕೊಡುವ ಚಿತ್ರಮಂದಿರಗಳೇ ಬಂದ್ ಆದರೆ, ನಿರ್ಮಾಪಕನಿಗೆ ಭಾರೀ ನಷ್ಟವಾಗಲಿದೆ. ಹಾಗಾಗಿ ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲೇ ಒಂದಷ್ಟು ಕಾರ್ಯಗಳು ನಡೆಯಬೇಕು ಎನ್ನುತ್ತಾರೆ ವಿತರಕರು.

Share This Article
Leave a Comment

Leave a Reply

Your email address will not be published. Required fields are marked *