ಮಂಡ್ಯ: ಕಳೆದ ಲೋಕಸಭಾ ಚುನಾವಣೆ (Lokasabha Election) ಯಲ್ಲಿ ಮಂಡ್ಯದಲ್ಲಿ ಕಹಳೆ ಊದಿ ದಳಪತಿಗಳಿಗೆ ಸೆಡ್ಡು ಹೊಡೆದಿದ್ದ ಸಂಸದೆ ಸುಮಲತಾ ಅಂಬರೀಶ್ (Sumalatha Ambreesh), ಇದೀಗ ಯಾವ ಪಕ್ಷ ಸೇರ್ಪಡೆ ಆಗುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಮುಂಬರುವ ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಗಾಳಿ ಸುದ್ದಿಗಳು ಸಹ ಹರಿದಾಡುತ್ತಿವೆ. ಇದಕ್ಕೆ ಪುಷ್ಟಿ ನೀಡಲು ರೆಬೆಲ್ ಲೇಡಿ ಬೆಂಬಲಿಗರು ಮುಂದಾಗಿದ್ದಾರೆ.
Advertisement
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ಕರೆನಾಡು ಮಂಡ್ಯ (Mandya) ಜಿಲ್ಲೆ ಅಕ್ಷರಶಃ ರಾಜಕೀಯ ರಣರಂಗವಾಗಿ ಬದಲಾಗಿತ್ತು. ಇಡೀ ಇಂಡಿಯಾದಲ್ಲಿ ಚುನಾವಣಾ ಕದನ ಇದ್ರು ಸಹ ಜನರ ಕಣ್ಣು ಮಾತ್ರ ಮಂಡ್ಯದ ಕಡೆ ಮೂಡಿತ್ತು. ಇದಕ್ಕೆ ಪ್ರಮುಖ ಕಾರಣ ಎಂದ್ರೆ ಸುಮಲತಾ ಅಂಬರೀಶ್ ಅವರು ಸ್ವಾಭಿಮಾನದ ಹೆಸರಲ್ಲಿ ಕಹಳೆಯ ಗುರುತಿಗೆ ಸ್ಪರ್ಧೆ ಮಾಡಿದ್ದ.
Advertisement
Advertisement
ಜೆಡಿಎಸ್ (JDS) ಪಕ್ಷದಿಂದ ತೆನೆ ಹೊತ್ತ ರೈತ ಮಹಿಳೆಯ ಗುರುತಿನಿಂದ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾಮಿ. ಇವರಿಬ್ಬರ ಲೋಕಸಭಾ ಸಭಾ ಚುನಾವಣೆಯ ಕದನ ಮಂಡ್ಯ ರಾಜಕೀಯದ ಜೊತೆಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಂಚಲನವನ್ನು ಉಂಟುಮಾಡಿತು. ಚುನಾವಣಾ ಕದನದ ಉದ್ದಕ್ಕೂ ಮಾತಿನ ವಾಗ್ದಾಳಿಯ ಮೂಲಕ ಎರಡು ಕಡೆಯಿಂದ ಅಸ್ತ್ರಕ್ಕೆ ಪ್ರತ್ಯಸ್ತ್ರಗಳನ್ನು ಬಿಡುವ ಮೂಲಕ ರಣರಂಗದ ಕುತೂಹಲವನ್ನು ಹೆಚ್ಚಿಸಿದ್ರು. ಅಂತಿಮವಾಗಿ ಸುಮಲತಾ ಗೆಲುವು ಸಾಧಿಸುವ ಮೂಲಕ ಸಂಸದೆ ಗದ್ದುಗೆ ಏರುವುದರ ಜೊತೆಗೆ ದಳಪತಿಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ರು. ಇದನ್ನೂ ಓದಿ: Will You Marry Me – ಆರೆಂಜ್ ಆರ್ಮಿ ಒಡತಿ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ
Advertisement
ಸುಮಲತಾ ಅಂಬರೀಶ್ ಸಂಸದರಾಗಿ ನಾಲ್ಕು ವರ್ಷಗಳು ಸಮೀಪಿಸುತ್ತಾ ಇವೆ. ಈ ಹೊತ್ತಿನಲ್ಲಿ ಸುಮಲತಾ ಅಂಬರೀಶ್ ಬಹಿರಂಗವಾಗಿ ಬೆಂಬಲಿಸಿದ ಬಿಜೆಪಿ ಸೇರ್ತಾರಾ? ಅಥವಾ ಜೆಡಿಎಸ್ ಹಾಗೂ ಕಾಂಗ್ರೆಸ್ (Congress) ನ ಮೈತ್ರಿ ಮನೆಯ ಹಿಂಬಾಗಿಲಿನಿಂದ ಸಪೋರ್ಟ್ ಮಾಡಿದ್ದ ಕಾಂಗ್ರೆಸ್ ನಾಯಕರ ಜೊತೆ ಕೈ ಪಕ್ಷ ಸೇರುತ್ತಾರಾ? ಎಂಬದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಒಂದು ಕಡೆ ಸುಮಲತಾ ಅಂಬರೀಶ್ ಪಕ್ಷ ಸೇರ್ಪಡೆಯ ಪ್ರಶ್ನೆಗಳು ಮೂಡುತ್ತಿದ್ರೆ ಇನ್ನೊಂದೆಡೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ಅಥವಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಗಾಳಿ ಸುದ್ದಿಗಳು ಸಹ ಹರಡುತ್ತಿವೆ. ಇದಕ್ಕೆ ಪೂರಕ ಎಂಬಂತೆ ಸುಮಲತಾ ಅಂಬರೀಶ್ ಸಹ ಸನ್ನಿವೇಶಕ್ಕೆ ಅನುಗುಣವಾಗಿ ನಿರ್ಧಾರ ಮಾಡುವುದಾಗಿ ಹೇಳಿದ್ರು.
ಇನ್ನೊಂದೆಡೆ ಸುಮಲತಾ ಆಪ್ತರು ಹಾಗೂ ಬೆಂಬಲಿಗರು ಸುಮಲತಾ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು. ಕಮಾಲ್ ಮಾಡಿ ಶಾಸಕಿಯಾಗಿ ಸಚಿವರಾಗಬೇಕು. ಅಲ್ಲದೇ ಯಾವುದಾದರೂ ಪಕ್ಷ ಸೇರ್ಪಡೆಯಾಗುವುದು ಅನಿವಾರ್ಯ ಆಗಿದೆ. ಹೀಗಾಗಿ ಸುಮಲತಾ ಯಾವುದಾದರೂ ಪಕ್ಷ ಸೇರ್ಪಡೆ ಆದ್ರು ಸಹ ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ. ಹೀಗಾಗಿ ರೆಬೆಲ್ ಲೇಡಿಯ ಆಪ್ತ ಬಳಗ ಸುಮಲತಾ ಅಂಬರೀಶ್ ಅಭಿಮಾನಿಗಳು ಹಾಗೂ ಸ್ವಾಭಿಮಾನಿ ಪಡೆಯ ಪದಾಧಿಕಾರಿಗಳ ಸಭೆಯನ್ನು ಕರೆಯಲು ಮುಂದಾಗಿದೆ. ಈ ಸಭೆಯಲ್ಲಿ ಸುಮಲತಾ ಸ್ಪರ್ಧೆ ಕುರಿತು ಹಾಗೂ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಇದನ್ನೂ ಓದಿ: ಶನಿವಾರ ರಾಜ್ಯಕ್ಕೆ ಮತ್ತೆ ಜೆ.ಪಿ ನಡ್ಡಾ ಎಂಟ್ರಿ – ಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ
ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಕಹಳೆ ಸದ್ದಿನಿಂದ ಸಕ್ಕರೆ ನಾಡಿನ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ಸಿಯಾಗಿದ್ದ ಸುಮಲತಾ ಇದೀಗ ಎಂಎಲ್‍ಎ ಚುನಾವಣೆ ಮೂಲಕ ಮತ್ತೊಂದು ಅಧ್ಯಾಯ ಬರೆಯಲು ಮುಂದಾಗುತ್ತಾರಾ? ಅಥವಾ ನಾನು ರಾಜ್ಯ ರಾಜಕೀಯ ಬರಲ್ಲ ನಾನು ರಾಷ್ಟ್ರ ರಾಜಕೀಯದಲ್ಲೇ ಇರ್ತೀನಿ ಎಂಬ ಉತ್ತರ ಕೊಡ್ತಾರಾ ಎನ್ನುವುದನ್ನು ಸದ್ಯದಲ್ಲೇ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k