ನಟ ಸುದೀಪ್ (Sudeep) ಮತ್ತು ನಿರ್ಮಾಪಕ ಎಮ್.ಎನ್ ಕುಮಾರ್ (M. N. Kumar) ನಡುವಿನ ಆರೋಪ ಪ್ರತ್ಯಾರೋಪ ಕಾನೂನು ಹಂತ ತಲುಪಿದೆ. ಇಂದು ಬೆಳಗ್ಗೆ ಕುಮಾರ್ ಅವರಿಗೆ ಮಾನನಷ್ಟ (Defamation) ಪ್ರಕರಣದ ನೋಟಿಸ್ ನೀಡಿದ್ದರು ಸುದೀಪ್ ಕಡೆಯ ವಕೀಲರು. ಅದಕ್ಕೆ ಸಂಬಂಧಿಸಿದಂತೆ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕರ ಸಂಘದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಕುಮಾರ್, ಹಲವಾರು ವಿಚಾರಗಳನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ಎಂ.ಎನ್.ಕುಮಾರ್, ‘ನಾನು ಮಾಧ್ಯಮದ ಮುಂದೆ ನ್ಯಾಯ ಕೇಳಿದೆ. ನಾನು ಹಣ ಕೊಟ್ಟು ಇಷ್ಟು ವರ್ಷ ಆಗಿದೆ ಸ್ಪಂದಿಸುತ್ತಿಲ್ಲ. ವಾಣಿಜ್ಯ ಮಂಡಳಿಯಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಡಿ ಅಂತ ಕೇಳಿದ್ದೆ. ಈಗ ನನಗೆ ವಾಟ್ಸಪ್ ಮೂಲಕ ನೋಟಿಸ್ ಬಂದಿದೆ. ಪೋಸ್ಟ್ ಮುಖಾಂತರ ಬಂದಿಲ್ಲ. ಅನೌನ್ ನಂಬರ್ ನಿಂದ ಬಂದಿದೆ. ಅಫೀಶಿಯಲ್ ಆಗಿ ಬರುವ ತನಕ ರಿಯಾಕ್ಟ್ ಮಾಡಲ್ಲ. ಬಂದ ಬಳಿಕ ವಾಣಿಜ್ಯ ಮಂಡಳಿ, ನಿರ್ಮಾಪಕ ಅಸೋಸಿಯೇಷನ್ ನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡ್ತವೆ’ ಎಂದರು ಕುಮಾರ್. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಮುಂದುವರೆದ ಮಾತನಾಡಿದ ಅವರು, ‘ಸುದೀಪ್ 45 ಸಿನೆಮಾ ಮಾಡಿದ್ದಾರೆ. ಅಷ್ಟು ಸಿನಿಮಾದ ಅಗ್ರಿಮೆಂಟ್ ಕೊಡೋಕೆ ಹೇಳಿ. ಸಿನಿಮಾ ನಡೆಯೋದು ನಂಬಿಕೆ ಮೇಲೆ. ಅದರಂತೆ ಹಣ ಕೊಟ್ಟಿದ್ದೇನೆ. 6 ವರ್ಷ ಆಗಿದೆ ಕಮಿಟ್ಮೆಂಟ್ ಆಗಿ. ವಿಕ್ರಾಂತ್ ರೋಣ ಬಳಿಕ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ರು ಮಾಡಲಿಲ್ಲ. ಆ ಕಡೆ ನಂದಕಿಶೋರ್ ‘ಮುತ್ತತ್ತಿ ಸತ್ಯರಾಮ’ ಟೈಟಲ್ ಗೊತ್ತಿಲ್ಲ ಅಂತಾರೆ. ಬಹಿರಂಗ ಚರ್ಚೆಗೆ ಬರಲಿ ಬೇಕಿದ್ದರೆ. ಕಾನೂನು ಎಲ್ಲರಿಗೂ ಒಂದ’ ಎಂದರು ಕುಮಾರ್.
ನಮಗೆ ತಂದೆ, ತಾಯಿ, ಸ್ನೇಹಿತರು ಮೋಸ ಮಾಡಬೇಡ, ಸುಳ್ಳು ಹೇಳಬೇಡ, ತಲೆಹೊಡಿಯಬೇಡ ಅಂತ ಹೇಳಿದ್ದಾರೆ. ಉದ್ಯಮ ಚೆನ್ನಾಗಿದೆ. ನಿರ್ಮಾಪಕರಿಗೆ ಸುಳ್ಳು ಹೇಳಬಾರದು. ವಿಕ್ರಾಂತ್ ರೋಣ ವೇಳೆ ನನ್ನನ್ನು ಕರೆಸಿದ್ರು. ನಾನು ಅವರ ರೇಟ್ ಗೆ ಹೊಂದಾಣಿಕೆ ಮಾಡೋಕೆ ಆಗಲಿಲ್ಲ. ಹಾಗಾಗಿ ಚಿತ್ರ ನಮ್ಮ ಜೊತೆ ಆಗಲಿಲ್ಲ. ಮುತ್ತತ್ತಿ ಸತ್ಯರಾಜು ಟೈಟಲ್ ಕೊಟ್ಟಿದ್ದು ಅವರೆ. ಡೈರೆಕ್ಟರ್ ನಂದಕಿಶೋರ್ ಅವರನ್ನ ಅವರೇ ಸಜೆಸ್ಟ್ ಮಾಡಿದ್ದು. ಸಾಯಿಬಾಬಾ ಗಣಪತಿ ಮೇಲೆ ಬೇಕಿದ್ರೆ ಇಲ್ಲ ಅಂತ ಸುದೀಪ್ ಅವರು ಪ್ರಮಾಣ ಮಾಡಲಿ ಎನ್ನುವುದು ಕುಮಾರ್ ಮಾತು.
Web Stories