ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದು ಹೋಗಿದೆ. ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲೇ ಇಂಥದ್ದೊಂದು ಘಟನೆ ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ
Advertisement
ಅಮೆರಿಕಾದ ಲಾಸ್ ಎಂಜಲ್ಸ್ ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಜಗತ್ತಿನ ದಿಗ್ಗಜ ನಟರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಸಮಾರಂಭದಲ್ಲಿ ತರ್ಲೆ ತಮಾಷೆಗಳು ನಡೆಯುವುದು ಸಹಜ. ಸೆನ್ಸಾರ್ ಮಾಡಬೇಕಾದ ಪದಗಳು ಕೂಡ ಆಗಾಗ್ಗೆ ಈ ವೇದಿಕೆಯ ಮೇಲೆ ಕೇಳುತ್ತವೆ. ಆದರೆ, ಕಪಾಳಕ್ಕೆ ಹೊಡೆಸಿಕೊಳ್ಳುವಂತಹ ಸನ್ನಿವೇಶ ಇದೇ ಮೊದಲಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು
Advertisement
Advertisement
ಈ ಬಾರಿಯ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ಘೋಷಿಸಲು ಅತೀ ಉತ್ಸುಕರಾಗಿ ನಟ ಕ್ರಿಸ್ ರಾಕ್ ವೇದಿಕೆಗೆ ಬಂದರು. ತಮ್ಮ ಕೈಗೆ ಮೈಕ್ ಸಿಕ್ಕ ತಕ್ಷಣವೇ ಮಾತು ಆರಂಭಿಸಿದರು. ಆ ಮಾತು ಎಲ್ಲಿಗೆ ಹೋಯಿತು ಅಂದರೆ, ವೇದಿಕೆಯ ಮುಂದಿದ್ದ ಹೆಸರಾಂತ ನಟರನ್ನು ತಮಾಷೆಯಾಗಿಯೇ ಕಾಲೆಳೆಯುತ್ತಾ ಹೋದರು. ಇವರ ತಮಾಷೆಗೆ ಹೆಸರಾಂತ ನಟ ವಿಲ್ ಸ್ಮಿತ್ ಪತ್ನಿ ಪಿಂಕೆಟ್ ಸ್ಮಿತ್ ಆಹಾರವಾದರು. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿಲ್ ಸ್ಮಿತ್ ತಮ್ಮ ಪತ್ನಿಯನ್ನೂ ಕರೆತಂದಿದ್ದರು. ಸಂಭ್ರಮದಲ್ಲಿದ್ದ ಈ ಜೋಡಿಗೆ ಕ್ರಿಸ್ ರಾಕ್ ಮಾತು ಸರಿ ಅನಿಸಲಿಲ್ಲ. ಕೂಡಲೇ ವೇದಿಕೆ ಏರಿದ ವಿಲ್ ಸ್ಮಿತ್ ಕೋಪದಿಂದಲೇ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿಯೇ ಬಿಟ್ಟರು.
Advertisement
#badboys3 #gijane2 #willsmith #chrisrock #oscars #besttvever
Can’t believe what I just saw live on screen pic.twitter.com/YiijPRQENt
— Guy Springthorpe (the pistol slug) (@GuySpringthorpe) March 28, 2022
ಮೊದ ಮೊದಲು ಅದನ್ನು ತಮಾಷೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ತಮಾಷೆ ಆಗಿರಲಿಲ್ಲ. ತಮ್ಮ ಪತ್ನಿಯು ತಲೆಬೋಳಿಸಿಕೊಂಡಿರುವ ವಿಚಾರವನ್ನು ಕ್ರಿಸ್ ರಾಕ್ ತಮಾಷೆ ಮಾಡಿದ್ದಕ್ಕೆ ಅತೀವ ಕೋಪಕೊಂಡಿದ್ದರು ವಿಲ್ ಸ್ಮಿತ್. ‘ನನ್ನ ಪತ್ನಿಯ ಬಗ್ಗೆ ಮಾತಾಡಬೇಡ, ನಿನ್ನ ಕೆಟ್ಟ ಬಾಯಿಂದ ಅವಳ ಹೆಸರು ಹೇಳೂ ಬೇಡ’ ಎಂದು ಕಿರುಚಿದರು. ಸಂಭ್ರಮದಲ್ಲಿದ್ದ ಸಮಾರಂಭ ಕೆಲ ಹೊತ್ತು ಗೊಂದಲಮಯವಾಯಿತು. ಆನಂತರ ವಾತಾವರಣವನ್ನು ತಿಳಿಗೊಳಿಸುವಂತಹ ಎಲ್ಲ ಪ್ರಯತ್ನಗಳೂ ನಡೆದವು.
ಕ್ರಿಸ್ ರಾಕ್ ಮತ್ತು ವಿಲ್ ಸ್ಮಿತ್ ಜತೆ ಆಯೋಜಕರು ಪ್ರತ್ಯೇಕವಾಗಿ ಮಾತನಾಡಿದರು. ಹಲವರು ಹಲವು ರೀತಿಯಲ್ಲಿ ಸಮಾಧಾನ ಪಡಿಸುವಂತಹ ಪ್ರಯತ್ನಗಳು ನಡೆದವು. ನಂತರ ಮತ್ತೆ ಸಮಾರಂಭ ಶುರುವಾಯಿತು. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್
ಅಂದಹಾಗೆ ‘ಕಿಂಗ್ ರಿಚರ್ಡ್ಸ್’ ಸಿನಿಮಾದ ಅಭಿನಯಕ್ಕಾಗಿ ವಿಲ್ ಸ್ಮಿತ್ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಕೊನೆಗೆ ಈ ಪ್ರಶಸ್ತಿ ವಿಲ್ ಸ್ಮಿತ್ ಪಾಲಾಯಿತು. ಕಪಾಳಮೋಕ್ಷದ ಘಟನೆ ಇದೀಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.