ಆಸ್ಕರ್ ಪ್ರಶಸ್ತಿ 2022 ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಸಮಾರಂಭದಲ್ಲಿ ಹಾಸ್ಯನಟ ಕ್ರಿಸ್ ರಾಕ್‌ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ್ದರು. ನಂತರ ಪ್ರಶಸ್ತಿ ಸ್ವೀಕರಿಸಿ ಭಾವನಾತ್ಮಕವಾಗಿ ಮಾತನಾಡಿದ ಅವರು, ಕ್ರಿಸ್ ರಾಕ್ಗೆ ಕ್ಷಮೆ ಕೇಳಿರಲಿಲ್ಲ. ಈ ಘಟನೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬರುತ್ತಿತ್ತು. ಕೆಲವರು ಇದು ವೇದಿಕೆಗೆ ತೋರಿಸುವ ಗೌರವವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆ ಸೋಮವಾರ ರಾತ್ರಿ ವಿಲ್ ಸ್ಮಿತ್ ಸೋಶಿಯಲ್ ಮೀಡಯಾದಲ್ಲಿ ಕ್ರಿಸ್ ಅವರಿಗೆ ಕ್ಷಮೆಯಾಚಿಸಿದ್ದಾರೆ.
Advertisement
ಕ್ರಿಸ್ ರಾಕ್ ಆಸ್ಕರ್ 2022 ನಿರೂಪಣೆ ಮಾಡುತ್ತಿದ್ದು, ವಿಲ್ ಸ್ಮಿತ್ ಅವರಿಗೆ ಪ್ರಶಸ್ತಿ ಘೋಷಣೆಯಾದ ಮೇಲೆ ಅವರು ವೇದಿಕೆಗೆ ಬಂದಿದ್ದಾರೆ. ಈ ವೇಳೆ ಕ್ರಿಸ್, ವಿಲ್ ಸ್ಮಿತ್ ಪತ್ನಿ ಜಡಾ ಪಿಂಕೆಟ್ ಅವರ ಕೂದಲಿನ ಬಗ್ಗೆ ಹಾಸ್ಯ ಮಾಡಿದ್ದಾರೆ. ಇದರಿಂದ ಕೋಪಕೊಂಡ ವಿಲ್ಸ್ಮಿತ್, ಕ್ರಿಸ್‌ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಅವರು ಭಾವನಾತ್ಮಕವಾಗಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಭಾಷಣವನ್ನು ಮಾಡಿದ್ದಾರೆ. ಆದರೆ ಈ ವೇಳೆ ಅವರು ಕ್ರಿಸ್ಗೆ ಕ್ಷಮೆಯಾಚಿಸಿಲ್ಲ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ
Advertisement
View this post on Instagram
Advertisement
ಸೋಮವಾರ ರಾತ್ರಿ ಇನ್ಸ್ಟಾಗ್ರಾಮ್‌ನಲ್ಲಿ ವಿಲ್ ಸ್ಮಿತ್, ಕ್ರಿಸ್, ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ವೇದಿಕೆ ಮೇಲೆ ಮೀತಿಮೀರಿ ನಡೆದುಕೊಂಡಿದ್ದೆ. ಈ ಘಟನೆಯಿಂದ ನಾನು ಮುಜುಗರಕ್ಕೊಳಗಾಗಿದ್ದೇನೆ. ಶಾಂತಿ ಮತ್ತು ಕರುಣೆಯಿರುವ ಜಗತ್ತಿನಲ್ಲಿ ವೈಲೆನ್‌ಗೆ ಜಾಗವಿರುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ.
Advertisement
ಹಿಂಸಾಚಾರದ ಎಲ್ಲ ರೂಪಗಳು ವಿಷಕಾರಿ ಮತ್ತು ವಿನಾಶಕಾರಿಯಾಗಿದೆ. ಕಳೆದ ರಾತ್ರಿಯ ಅಕಾಡೆಮಿ ಪ್ರಶಸ್ತಿಗಳಲ್ಲಿ ನನ್ನ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದು. ಜೋಕ್‌ಗಳು ಅವರ ಕೆಲಸದ ಭಾಗವಾಗಿರುತ್ತೆ. ಆದರೆ ನಾನು ಈ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತಪಡಿಸಿದೆ. ಇದು ನನ್ನ ತಪ್ಪು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್