ಚಂಡೀಗಢ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು ಮಹಿಳೆಯೊಬ್ಬರು (Woman) ಮಾಡಿದ ಮನವಿಗೆ ಹಾಸ್ಯ ಚಟಾಕಿ ಹಾರಿಸಿದ ಪ್ರಸಂಗವೊಂದು ನಡೆದಿದೆ.
ಸದ್ಯ ಖಟ್ಟರ್ ಅವರು ಮಹಿಳೆಗೆ ಹೇಳಿದ ವೀಡಿಯೋ ಸಾಮಾಜಿಕ ಜಾಲತಾಣಗಲ್ಲಿ ಸಖತ್ ವೈರಲ್ ಆಗುತ್ತಿದೆ. ಸಿಎಂ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
Advertisement
सार्वजनिक कार्यक्रमों में जनता, खासतौर पर महिलाओं की भावनाओं और मांगों के साथ भद्दा मजाक करना मुख्यमंत्री खट्टर साहब की दैनिक दिनचर्या हो गई है।
मेरी बात नोट करके रख लीजिए, इस बार इनका ये अहंकार बुरी तरह टूटने वाला है। pic.twitter.com/dXSJ5Py5Ip
— Deepender S Hooda (@DeependerSHooda) September 7, 2023
Advertisement
ಮಹಿಳೆ ಹೇಳಿದ್ದೇನು..?: ಸಿಎಂ ಇದ್ದ ಕಾರ್ಯಕ್ರಮದಲ್ಲಿ ಮಹಿಳೆ ತನ್ನ ನೆರೆಯ ಗ್ರಾಮವಾದ ಭಟೋಲ್ ಜತ್ತನ್‍ನಲ್ಲಿ ಕಾರ್ಖಾನೆಯನ್ನು (Factory) ಸ್ಥಾಪಿಸಲು ಮನವಿ ಮಾಡಿಕೊಂಡರು. ಇದರಿಂದ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾಗಿದೆ. ಈ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದು ಎಂಬುದು ಆಕೆಯ ಉದ್ದೇಶವಾಗಿತ್ತು.
Advertisement
Advertisement
ಮಹಿಳೆಯ ಮನವಿಗೆ ಪ್ರತಿಕ್ರಿಯಿಸಿದ ಖಟ್ಟರ್, ಮುಂದಿನ ಬಾರಿ ಚಂದ್ರಯಾನ-4 ರಲ್ಲಿ ನಿಮ್ಮನ್ನು ಚಂದ್ರನಲ್ಲಿಗೆ ಕಳುಹಿಸಲಾಗುವುದು. ಈಗ ಕುಳಿತುಕೊಳ್ಳಿ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ಚುನಾವಣೆ ನಡೆಸುತ್ತಿದೆ: ಅಮೆರಿಕ ರಾಜ್ಯ ಕಾರ್ಯದರ್ಶಿ ಆರೋಪ
ಸದ್ಯ ವೈರಲ್ ಆದ ವೀಡಿಯೋದಲ್ಲಿ ಸಾರ್ವಜನಿಕ ಸಭೆ ನಡೆಯುವ ಸ್ಥಳ ಸ್ಪಷ್ಟವಾಗಿಲ್ಲ. ಖಟ್ಟರ್ ಅವರು ತಮ್ಮ ಜನಸಂವಾದ್ ಕಾರ್ಯಕ್ರಮದ ಭಾಗವಾಗಿ ಪ್ರಸ್ತುತ ಹಿಸಾರ್ ಜಿಲ್ಲೆಯಲ್ಲಿದ್ದಾರೆ. ಈ ವಿಡಿಯೋವನ್ನು ರಾಜ್ಯದ ಕೆಲವು ಕಾಂಗ್ರೆಸ್ ಮತ್ತು ಎಎಪಿ ನಾಯಕರು ಹಂಚಿಕೊಂಡಿದ್ದಾರೆ. ಖಟ್ಟರ್ ಅವರ ‘ಚಂದ್ರಯಾನ’ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಎಪಿ ವಾಗ್ದಾಳಿ ನಡೆಸಿ.
Web Stories