Bengaluru CityCinemaKarnatakaLatestMain PostSandalwoodSouth cinema

ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

`ಕಾಂತಾರ'(Kantara Film) ಸಿನಿಮಾ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ. ಇದೀಗ ರಿಷಬ್ ಶೆಟ್ಟಿ ಅವರ ಶಕ್ತಿಯಾಗಿರುವ ಅವರ ಪತ್ನಿ ಪ್ರಗತಿ(Pragathi Shetty) ಕೂಡ ಫುಲ್ ಟೈಮ್ ಬಣ್ಣ ಹಚ್ಚುತ್ತಾರಾ ಎಂಬುದನ್ನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ(Sandalwood) ಈಗಾಗಲೇ ಫ್ಯಾಷನ್ ಡಿಸೈನರ್ ಆಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರಗತಿ ಶೆಟ್ಟಿ, ನೋಡಲು ಯಾವ ಹೀರೋಯಿನ್‌ಗೂ ಕಮ್ಮಿಯಿಲ್ಲ. ನೋಡಲು ಚೆಂದ, ಪ್ರತಿಭಾವಂತೆ ಕೂಡ. ಈಗಾಗಲೇ `ಕಾಂತಾರ’ ಚಿತ್ರದಲ್ಲಿ ರಾಣಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೊತೆಗೆ ಕಾಂತಾರ ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರಿಗೂ ಪ್ರಗತಿ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ನೀವ್ಯಾಕೆ ಹೀರೋಯಿನ್ ಆಗಬಾರದು ಅಂತಾ ಫ್ಯಾನ್ಸ್ ಕೂಡ ಪ್ರಗತಿಗೆ ಹೊಸ ಬೇಡಿಕೆ ಇಟ್ಟಿದ್ದಾರೆ. ನಟನೆಗೆ ಬಗ್ಗೆ ಆಸಕ್ತಿ ಇದ್ಯಾ ಎಂಬುದರ ಬಗ್ಗೆ ರಿಷಬ್ ಪತ್ನಿ ಪ್ರಗತಿ  ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ:ಗಡಿನಾಡ ಕನ್ನಡಿಗ ಎಂದ ರೂಪೇಶ್‌ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು

ಆಕ್ಟಿಂಗ್ ಕಡೆ ಖಂಡಿತಾ ಆಸಕ್ತಿ ಅಂತಾ ಎನುಯಿಲ್ಲ. ನಾನು ಈ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿಲ್ಲ. `ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು’ ನನಗೇನು ಹೇಳದೇ ರಿಷಬ್(Rishab Shetty) ಪುಟ್ಟ ಪಾತ್ರ ಮಾಡಿಸಿದ್ದರು ಅದು ಕೂಡ ಕಡೆಯ ಕ್ಷಣದಲ್ಲಿ, ಕಾಂತಾರ ಎರಡು ದಿನ ಮುಂಚಿತವಾಗಿ ಹೇಳಿದ್ದರು. ಆದರೆ ನಟಿಸಲೇಬೇಕು ಯಾವುದೇ ಆಸಕ್ತಿಯಿಲ್ಲ. ಸಮಯ ಮತ್ತು ಸಂದರ್ಭಕ್ಕೆ ಅನಿವಾರ್ಯವಾಗಿದ್ದಾಗ ನಟಿಸುತ್ತೇನೆ. ಆದರೆ ಫ್ಯಾಷನ್ ಡಿಸೈನಿಂಗ್ ಕಡೆ ನನ್ನ ಗಮನವಿರುತ್ತದೆ ಎಂದು ಮಾತನಾಡಿದ್ದಾರೆ.

ರಿಷಬ್ ಅವರ ಸಕ್ಸಸ್‌ನಲ್ಲಿ ಪ್ರಗತಿ ಶೆಟ್ಟಿ ಅವರ ಶ್ರಮ ಸಾಕಷ್ಟಿದೆ. ರಿಷಬ್ ಸಿನಿಮಾ ಜರ್ನಿ ಜೊತೆ ಪ್ರಗತಿ ಅವರ ನಡೆಗೂ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಯಾಗುತ್ತಿದೆ. ನಟನೆ ಮತ್ತು ಫ್ಯಾಷನ್ ಲೋಕದಲ್ಲಿ ಪ್ರಗತಿ ಶೆಟ್ಟಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

Live Tv

Back to top button