ತುಮಕೂರು/ಬೆಂಗಳೂರು: ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ರಾಜಕೀಯ ಪ್ರವೇಶ ಮಾಡ್ತಾ ಇದ್ದಾರಾ? ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದಿಂದ ಅವರು ಸ್ಪರ್ಧಿಸೋದು ಖಚಿತನಾ? ಹೀಗೊಂದು ಸುದ್ದಿ ತುಮಕೂರು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ.
Advertisement
ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಟ್ಟರೆ ತಮ್ಮ ಮಗನಿಗೂ ಮಧುಗಿರಿಯಿಂದ ಟಿಕೆಟ್ ಕೊಡಿ ಎಂದು ಅನಿತಾ ಕುಮಾರಸ್ವಾಮಿ, ಪತಿ ಎಚ್‍ಡಿ ಕುಮಾರಸ್ವಾಮಿ ಬಳಿ ಬೇಡಿಕೆ ಇಟ್ಟಿದ್ದಾರೆ. ಪತ್ನಿಯ ಮಾತನ್ನು ತಳ್ಳಿಹಾಕಲಾಗದ ಕುಮಾರಸ್ವಾಮಿ ಟಿಕೆಟ್ ನೀಡುವ ಅಭಯ ನೀಡಿದ್ದಾರೆ ಎಂದೆಲ್ಲಾ ಚರ್ಚೆಯಾಗ್ತಿದೆ.
Advertisement
Advertisement
2013 ರಲ್ಲಿ ಆಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಅನಿತಾ ಕುಮಾರಸ್ವಾಮಿ ಮಧುಗಿರಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರು. ಹಾಗಾಗಿ ಮಧುಗಿರಿಯಿಂದಲೇ ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ.
Advertisement
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಎಚ್‍ಡಿಕೆ, ನಿಖಿಲ್‍ಗೌಡ ಸದ್ಯಕ್ಕೆ ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಯಾವುದೇ ಪದಾಧಿಕಾರಿಯ ಹುದ್ದೆಯನ್ನೂ ನೀಡಲ್ಲ ಅಂದ್ರು.
ನನ್ನ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ಪರ ಪ್ರಚಾರ ಮಾಡ್ತಾನೆ ಅಷ್ಟೇ. ನಿಖಿಲ್ ಗೌಡ ಸ್ಪರ್ಧೆ ಮಾಡಲ್ಲ, ಪ್ರಜ್ವಲ್ ರಾಜರಾಜೇಶ್ವರಿನಗರದಿಂದ ಸ್ಪರ್ಧಿಸಲ್ಲ. ಇದನ್ನು ದೇವೇಗೌಡರೇ ಈಗಾಗಲೇ ಹೇಳಿದ್ದಾರೆ ಎಂದು ತಿಳಿಸಿದ್ರು.