ಲಕ್ನೋ: ಉತ್ತರ ಪ್ರದೇಶದ (Uttar Pradesh) ರಸ್ತೆಗಳನ್ನು (Road) 2024ರ ಒಳಗಾಗಿ ಅಮೆರಿಕದ (America) ರಸ್ತೆಗಳಿಗಿಂತಲೂ ಉತ್ತಮವಾಗಿಸುತ್ತೇವೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ವಾಗ್ದಾನ ಮಾಡಿದ್ದಾರೆ.
ಉತ್ತರ ಪ್ರದೇಶದ ರಸ್ತೆ ಯೋಜನೆಗಳಿಗೆ ಉತ್ತೇಜನ ನೀಡಲು 8,000 ರೂ. ಪ್ಯಾಕೇಜ್ ಅನ್ನು ಘೋಷಿಸಿದ ನಿತಿನ್ ಗಡ್ಕರಿ, 2024ರ ಒಳಗಾಗಿ ಉತ್ತರ ಪ್ರದೇಶದ ರಸ್ತೆಗಳನ್ನು ಅಮೆರಿಕಗಿಂತ ಉತ್ತಮವಾಗಿ ಮಾಡಬೇಕು. ಇದಕ್ಕಾಗಿ ಮೋದಿ ಸರ್ಕಾರ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶಕ್ಕಾಗಿ 5 ಲಕ್ಷ ಕೋಟಿ ರೂ. ಅನುಮೋದನೆ ನೀಡಲು ಹೊರಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ನಿಷ್ಠಾವಂತ ಭಕ್ತ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಕೇಜ್ರಿವಾಲ್
Advertisement
Advertisement
ಆಗಸ್ಟ್ ತಿಂಗಳಲ್ಲಿ ರಾಜ್ಯಸಭೆಯಲ್ಲಿ ನಿತಿನ್ ಗಡ್ಕರಿ ಅವರು, ಭಾರತದಲ್ಲಿ ರಸ್ತೆ ಮೂಲಸೌಕರ್ಯ ಮುಂದೆ ಅಮೆರಿಕದಂತೆ ಆಗುತ್ತದೆ ಎಂದು ಹೇಳಿದ್ದರು. ಈಗ ನಮ್ಮಲ್ಲಿ ಹಣದ ಕೊರತೆ ಇಲ್ಲ. 2024ರ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತದ ರಸ್ತೆ ಮೂಲಸೌಕರ್ಯ ಅಮೆರಿಕದಲ್ಲಿರುವಂತೆಯೇ ಇರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದಿದ್ದರು. ಇದನ್ನೂ ಓದಿ: ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿಎಂ ಬೊಮ್ಮಾಯಿ