ಬೆಂಗಳೂರು: ಕಾವೇರಿ ನದಿ ಮತ್ತು ಡ್ಯಾಂಗಳು ಕನ್ನಡಿಗರ ಕೈತಪ್ಪಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ-ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ 14 ಪುಟಗಳ ಕಾವೇರಿ ಸ್ಕೀಂ ಕರಡುವನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ.
ಇಂದು ಇದರ ಬಗ್ಗೆ ವಿಚಾರಣೆ ನಡೆಯಲಿದ್ದು, ಎಲ್ಲಾ ರಾಜ್ಯಗಳಿಂದ ಒಟ್ಟು 9 ಜನ ಸದಸ್ಯರ ನೇಮಕ ಮಾಡುವುದಾಗಿ ಸ್ಕೀಂ ಕರಡುನಲ್ಲಿ ಉಲ್ಲೇಖಿಸಲಾಗಿದೆ. ಕಾವೇರಿ ಸ್ಕೀಂನ್ನು ಏನೆಂದು ಕರೆಯಬೇಕು, ಪ್ರಾಧಿಕಾರವೋ, ಸಮಿತಿಯೋ, ಮಂಡಳಿಯೋ ಎಂಬುದನ್ನು ನ್ಯಾಯಪೀಠವೇ ತೀರ್ಮಾನಿಸುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಇದನ್ನೂ ಓದಿ: ಕಾವೇರಿ ಸ್ಕೀಂ ಸುಪ್ರೀಂಗೆ ಕರಡು ಅಫಿಡವಿಟ್ ಸಲ್ಲಿಕೆ: ಹೇಗಿರಲಿದೆ ಸ್ಕೀಂ? ಕಾರ್ಯಗಳು ಏನು? ಯಾರೆಲ್ಲ ಇರಲಿದ್ದಾರೆ?
Advertisement
ಹಾಗಾದ್ರೆ ಕಾವೇರಿ ಡ್ರಾಫ್ಟ್ ಸ್ಕೀಂ ಕರಡುವಿನಲ್ಲಿರುವ ಅಂಶಗಳು ಏನೇನು ಅಂತ ನೋಡೋದಾದ್ರೆ..
* ಕಾವೇರಿ ನೀರಿನ ಸಂಗ್ರಹ & ನಿಯಂತ್ರಣ
* ಜಲಾಶಯ, ನೀರು ಬಿಡುಗಡೆಯ ಮೇಲ್ವಿಚಾರಣೆ
* ಬಿಳಿಗುಂಡ್ಲು ಬಳಿ ನೀರಿನ ಅಳತೆ ಮಾಡುವ ಜವಾಬ್ದಾರಿ ಪ್ರಾಧಿಕಾರದ್ದೇ
* ನ್ಯಾಯಮಂಡಳಿ ಆದೇಶದಂತೆ ಕಾವೇರಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳುವುದು
* ಪ್ರತಿ 10 ದಿನಕ್ಕೊಮ್ಮೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ
* ನೀರಿನ ಕೊರತೆ ಕಂಡು ಬಂದರೆ ರಾಜ್ಯಗಳ ಪಾಲಿನಲ್ಲಿ ಕಡಿತ
* ಮುಂಗಾರು ಮಳೆಯ ಆಧರಿಸಿ ಪ್ರಾಧಿಕಾರದಿಂದ ನಿರ್ಧಾರ
* ಕರ್ನಾಟಕದ ನಾಲ್ಕು ಡ್ಯಾಮ್‍ಗಳು, ಕೇರಳ, ತಮಿಳುನಾಡಿನ ಡ್ಯಾಂಗಳ ನಡುವೆ ಸಮನ್ವಯ
* ಪ್ರಾಧಿಕಾರದ ಸೂಚನೆಯಂತೆ ಜಲಾಶಯಗಳ ಕಾರ್ಯನಿರ್ವಹಣೆ
* ಕಾವೇರಿಕೊಳ್ಳದ ಬೆಳೆ ಪ್ರದೇಶ, ಬೆಳೆ ಸ್ವರೂಪದ ಬಗ್ಗೆ ನಿಗಾ
* ಪ್ರತಿವರ್ಷ ಬೇಕಾದ ನೀರಿನ ಅಗತ್ಯತೆ ಬಗ್ಗೆ ಅಂದಾಜು ಸಲ್ಲಿಕೆ ಕಡ್ಡಾಯ
* ಪ್ರಾಧಿಕಾರದ ಸದಸ್ಯರ ಡ್ಯಾಮ್‍ಗಳ ಭೇಟಿಗೆ ಪರಮಾಧಿಕಾರ
* ಡ್ಯಾಮ್‍ಗಳ ಕಾಮಗಾರಿ ಗುತ್ತಿಗೆಗೆ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯ
* ಕಾವೇರಿಕೊಳ್ಳದ ರಾಜ್ಯಗಳು ಒಪ್ಪದಿದ್ದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶ
* ಕಾವೇರಿ ಪ್ರಾಧಿಕಾರದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದೆ