ಬೆಂಗಳೂರು: ಬಿಜೆಪಿ-ಜೆಡಿಎಸ್ (BJP-JDS) ದೋಸ್ತಿ ಬೆನ್ನಲ್ಲೇ ಲೋಕಸಭೆ ಚುನಾವಣೆಗೆ (Lok Sabha Election) ಸ್ಪರ್ಧೆ ಫೈಟ್‌ಗೆ ವೇದಿಕೆ ಸಿದ್ದವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಸ್ಪರ್ಧೆ ಬಗ್ಗೆ ಚರ್ಚೆ ಶುರುವಾಗಿದೆ. 2024ರ ಲೋಕಸಭೆ ಚುನಾವಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಹೈವೋಲ್ಟೇಜ್ ಕ್ಷೇತ್ರ ಮಂಡ್ಯ (Mandya) ಅಥವಾ ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ. ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವರಿಷ್ಠ ದೇವೇಗೌಡರ ತೀರ್ಮಾನ ಏನು ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಸೀಟು ಹಂಚಿಕೆ ಫೈನಲ್ ಆದ ಮೇಲೆ ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದನ್ನೂ ಓದಿ: ಔತಣಕೂಟಕ್ಕೆ ದೀದಿ ಹೋಗಿದ್ದಕ್ಕೆ ಕಾಂಗ್ರೆಸ್ ತಗಾದೆ
ಬೆಂಗಳೂರು ಗ್ರಾಮಾಂತರ ಯಾಕೆ?
ಒಕ್ಕಲಿಗ ಮತ ಹೆಚ್ಚು ಇರುವ ಕ್ಷೇತ್ರವಾಗಿದ್ದು ಜೆಡಿಎಸ್ ಮತ ಜಾಸ್ತಿಯಿದೆ. ಹಿಂದೊಮ್ಮೆ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕುಮಾರಸ್ವಾಮಿ ಮತ್ತೆ ಸ್ಪರ್ಧೆ ಮಾಡಿದರೆ ಗೆಲುವು ಸುಲಭ ಎಂಬುದು ಸದ್ಯದ ಲೆಕ್ಕಾಚಾರ. ಡಿಕೆ ಸುರೇಶ್ (DK Suresh) ಹಾಲಿ ಸಂಸದರಾಗಿದ್ದು, ಈಗಾಗಲೇ ಡಿಕೆ ಬ್ರದರ್ಸ್ ವಿರುದ್ಧ ಹೆಚ್‌ಡಿಕೆ ತೊಡೆ ತಟ್ಟಿದ್ದಾರೆ. ಈ ಕಾರಣಕ್ಕೆ ಒಕ್ಕಲಿಗ (Vokkaliga) ನಾಯಕತ್ವದ ಫೈಟ್‌ನಿಂದ ಡಿಕೆ ಬ್ರದರ್ಸ್ ಮಟ್ಟ ಹಾಕಲು ಪ್ಲ್ಯಾನ್ ಮಾಡಲಾಗುತ್ತಿದೆ.
ಮಂಡ್ಯ ಯಾಕೆ?
ಹಳೆ ಮೈಸೂರು (Old Mysuru) ಭಾಗದ ಪ್ರಬಲ ಕ್ಷೇತ್ರ ಜೊತೆಗೆ ಜೆಡಿಎಸ್ ಭದ್ರಕೋಟೆಯಾಗಿದೆ. ಹಳೆ ಮೈಸೂರು ಭಾಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಮಂಡ್ಯ ಕ್ಷೇತ್ರ ಮುಖ್ಯ. ಕಾಂಗ್ರೆಸ್ ವಿರುದ್ಧ ರಾಜಕೀಯ ಮಾಡಬೇಕಾದರೆ ಮಂಡ್ಯ ಕ್ಷೇತ್ರ ಕೈಯಲ್ಲಿರಬೇಕು ಎಂಬ ಲೆಕ್ಕಾಚಾರ ಜೆಡಿಎಸ್‌ನಲ್ಲಿದೆ. 2019ರಲ್ಲಿ ನಿಖಿಲ್ ಸೋಲಿನಿಂದ ಕುಮಾರಸ್ವಾಮಿ ಸ್ವಲ್ಪ ಮನಸ್ಸು ನೋವು ಪಟ್ಟಿದ್ದರು. ಮತ್ತೆ ಮಂಡ್ಯ ಗೆಲ್ಲುವ ಮೂಲಕ ಸೋಲಿನ ಮುಯ್ಯಿ ತೀರಿಸಿಕೊಳ್ಳಬಹುದು.
Web Stories