ತುಮಕೂರು: ಪವರ್ ಶೇರಿಂಗ್ (Power Sharing) ಆಗೋದಾದರೆ ದಲಿತ ಸಿಎಂಗೆ ಅವಕಾಶ ಕೊಟ್ಟರೆ ಸಂತೋಷದ ವಿಚಾರ ಎಂದು ಪಾವಗಡ ಶಾಸಕ ಹೆಚ್‌ವಿ ವೆಂಕಟೇಶ್ (HV Venkatesh) ಅಭಿಪ್ರಾಯಪಟ್ಟಿದ್ದಾರೆ.
ದಲಿತ ಸಿಎಂ ಕೂಗು ಕುರಿತು ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು (Siddaramaiah) ಮುಂದುವರಿದರೂ, ಡಿಕೆ ಶಿವಕುಮಾರ್ (DK Shivakumar) ಸಾಹೇಬರಿಗೂ ಸಿಎಂ ಸ್ಥಾನ ಕೊಟ್ಟರೂ ಅಥವಾ ದಲಿತರನ್ನು ಸಿಎಂ ಮಾಡಿದರೂ ನಮಗೆ ಸಂತೋಷ ಎಂದರು. ಇದನ್ನೂ ಓದಿ: ಸಂವಿಧಾನ ಪ್ರಜಾಪ್ರಭುತ್ವದ ಬಲವಾದ ಅಡಿಪಾಯ, ನಮ್ಮ ಕಾರ್ಯಗಳ ಮೂಲಕ ಮೌಲ್ಯಗಳನ್ನ ಬಲಪಡಿಸೋಣ: ಮೋದಿ ಕರೆ
2013ರಲ್ಲಿ ನಾನೂ ಕೂಡ ಸೋತಿದ್ದೆ, ಜಿ ಪರಮೇಶ್ವರ್ ಕೂಡ ಸೋತಿದ್ರು. ಜಿ ಪರಮೇಶ್ವರ್ ಗೆದ್ದಿದ್ರೆ ಅವರು ಸಿಎಂ ಕುರ್ಚಿ ಮೇಲೆ ಕೂರುತ್ತಿದ್ದರು. ಈಗ ಪರಮೇಶ್ವರ್ ಸಾಹೆಬ್ರು ಸಿಎಂ ಆಗಬೇಕು ಅನ್ನೋ ಆಸೆ ನನ್ನದು, ಹೈಕಮಾಂಡ್‌ಗೆ ಈ ಮೂಲಕ ಮನವಿಯನ್ನೂ ಮಾಡುತ್ತೆನೆ. ಏನೇ ಆದರೂ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಉದ್ಯಮಿ ಮನೋಜ್ ಕಿಡ್ನ್ಯಾಪ್ ಕೇಸ್ – ರೌಡಿ ಶೀಟರ್ ಬೇಕರಿ ರಘು ಅರೆಸ್ಟ್

