ಕನ್ನಡ ಸಿನಿಮಾ ರಂಗದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಆಗುತ್ತಾ? ಇಂತಹ ಆತಂಕದ ಮಾಹಿತಿಯನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೊರಹಾಕಿದ್ದಾರೆ. ಈ ಕುರಿತು ಅವರು ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಯಾವುದೇ ಕಾರಣಕ್ಕೂ ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ಯಜಮಾನರ (ವಿಷ್ಣುವರ್ಧನ್) ಸಮಾಧಿಯನ್ನು ನೆಲಸಮ ಮಾಡುವುದಕ್ಕೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
Advertisement
ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಯ ಜಾಗದ ಕುರಿತು ಕಳೆದ ಹದಿಮೂರು ವರ್ಷಗಳಿಂದ ವಿವಾದ ಕೋರ್ಟ್ ನಲ್ಲಿದೆ. ಹಾಗಾಗಿ ಹಿರಿಯ ನಟ ಬಾಲಣ್ಣ ಕುಟುಂಬ ಹಾಗೂ ವಿಷ್ಣು ಅಭಿಮಾನಿಗಳ ನಡುವೆ ತಿಕ್ಕಾಟವೂ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೋರ್ಟ್ ನಲ್ಲಿರುವ ಕೇಸ್ ಅಂತಿಮ ಹಂತಕ್ಕೆ ತಲುಪಿದ್ದು, ಬಾಲಣ್ಣ ಕುಟುಂಬದವರು ವಿಷ್ಣು ಸಮಾಧಿಯನ್ನು ನೆಲಸಮ ಮಾಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನೇ ವೀರಕಪುತ್ರ ಶ್ರೀನಿವಾಸ್ ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ವೀರಕಪುತ್ರ ಶ್ರೀನಿವಾಸ್ ವಿಡಿಯೋದಲ್ಲಿ ಹೇಳಿದಂತೆ, ‘ಬಾಲಣ್ಣ ಕುಟುಂಬದವರಾದ ಕಾರ್ತಿಕ್ ಯಜಮಾನರ ಪುಣ್ಯಭೂಮಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ವಿಷ್ಣುವರ್ಧನ್ ಕುಟುಂಬದವರಿಗೆ ಈ ಜಾಗವೇ ಇಷ್ಟವಿಲ್ಲವೆಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅಭಿಮಾನಿಗಳು ಪುಣ್ಯಭೂಮಿಗೆ ಕಾಲಿಡದಂತೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಇಲ್ಲಿಗೆ ನೂರು ಜನರೂ ಬರುವುದಿಲ್ಲ ಎಂದು ಸುಳ್ಳುಗಳನ್ನು ಹರಡುತ್ತಿದ್ದಾರೆ. ಹೀಗೆಯೇ ಸುಳ್ಳು ಹೇಳಿದರೆ, ನಾವೂ ಕೂಡ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಹಾಗಂತ ಅಭಿಮಾನ ಸ್ಟುಡಿಯೋದ ಜಾಗ, ಅವರ ಪಿತ್ರಾರ್ಜಿತ ಆಸ್ತಿಲ್ಲ. ಸರಕಾರ ನೀಡಿದ್ದು. ಈ ಕುರಿತು ನಾವೂ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
Advertisement
ಮುಂದುವರೆದು ಮಾತನಾಡಿರುವ ಶ್ರೀನಿವಾಸ್, ‘ವಿಷ್ಣುವರ್ಧನ್ ಪುಣ್ಯಭೂಮಿಗೆ ಕೇಳುತ್ತಿರುವುದು ಕೇವಲ ಹತ್ತು ಗುಂಟೆ ಜಾಗ. ಈ ಹಿಂದೆ ಬಾಲಣ್ಣ ಕುಟುಂಬದವರು ಜಿಲ್ಲಾಧಿಕಾರಿಗಳ ಎದುರು ಹತ್ತು ಗುಂಟೆ ಜಾಗ ಕೊಡುವುದಾಗಿ ಹೇಳಿದ್ದರು. ಪತ್ರವನ್ನೂ ಕೊಟ್ಟಿದ್ದರು. ಈಗ ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಾವು ಪುಣ್ಯಭೂಮಿಯನ್ನು ಉಳಿಸಿಕೊಳ್ಳಲು ಎಂತಹ ಹೋರಾಟಕ್ಕೂ ಸಿದ್ಧ. ಈ ಕುರಿತು ಬೃಹತ್ ಪ್ರತಿಭಟನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಇದೇ ವಿಷಯವಾಗಿ ವಿಷ್ಣುವರ್ಧನ್ ಅಳಿಯ ಅನಿರುದ್ಧ ಕೂಡ ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದು, ‘ಅಭಿಮಾನ ಸ್ಟುಡಿಯೋದಲ್ಲೇ ಸಮಾಧಿ ಇರಬೇಕು ಎನ್ನುವುದು ನಮ್ಮ ಕುಟುಂಬದ ಆಸೆ. ಅಭಿಮಾನಿಗಳಿಗೆ ಪೂಜೆ ಸಲ್ಲಿಸಲು, ಅಲ್ಲಿಗೆ ಭೇಟಿ ನೀಡಲು ಬಾಲಣ್ಣ ಕುಟುಂಬ ಅನುಮತಿ ಕೊಡಬೇಕು. ಯಾವುದೇ ಕಾರಣಕ್ಕೂ ನೆಲಸಮ ಮಾಡುವಂತಹ ನಿರ್ಧಾರ ತಗೆದುಕೊಳ್ಳಬಾರದು. ನಮ್ಮ ಕುಟುಂಬ ಕೂಡ ಈ ವಿಷಯದಲ್ಲಿ ಅಭಿಮಾನಿಗಳ ಜೊತೆ ಇರುತ್ತದೆ’ ಎಂದು ಅವರು ಹೇಳಿದ್ದಾರೆ.
ಅಭಿಮಾನಿ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಯನ್ನು ಉಳಿಸಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಮತ್ತು ವಿಷ್ಣುವರ್ಧನ್ ಕುಟುಂಬ ಪಣತೊಟ್ಟಿದೆ. ಆದರೆ, ಬಾಲಣ್ಣ ಕುಟುಂಬ ಇದಕ್ಕೆ ಅವಕಾಶ ಕೊಡುತ್ತಾ? ಮತ್ತು ಕೋರ್ಟ್ ಈ ಕುರಿತು ಯಾವ ರೀತಿಯ ತೀರ್ಪು ಕೊಡಬಹುದು ಎನ್ನುವ ಕುತೂಹಲ ಎಲ್ಲರದ್ದು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k