ರಾಜಕೀಯಕ್ಕೆ ಅಖಾಡಕ್ಕೆ ರಮೇಶ್ ಅರವಿಂದ್? ಸ್ಪಷ್ಟನೆ ನೀಡಿದ ನಟ

Public TV
1 Min Read
ramesh aravind 1

ನ್ನಡ ಚಿತ್ರರಂಗದ ಸ್ಟಾರ್ ನಟ ರಮೇಶ್ ಅರವಿಂದ್ ಅವರು ‘ಶಿವಾಜಿ ಸುರತ್ಕಲ್ 2’ (Shivaji Surathkal 2) ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ನಂತರ ಮುಂದೇನು? ತಮ್ಮ ಮುಂದಿನ ಚಿತ್ರ ಯಾವುದು? ರಾಜಕೀಯಕ್ಕೆ (Politics) ರಮೇಶ್ ಅರವಿಂದ್ (Ramesh Aravind)  ಬರುತ್ತಾರಾ ಹೀಗೆ ಹಲವು ವಿಚಾರಗಳ ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.

ramesh aravind 3

ರಮೇಶ್ ಅರವಿಂದ್ ಅವರು ಯಾವಾಗಲೂ ವಿಭಿನ್ನ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕನಾಗಿ ರಮೇಶ್ ಛಾಪು ಮೂಡಿಸಿದ್ದಾರೆ. Weekend With Ramesh ಕಾರ್ಯಕ್ರಮ ಸೇರಿದಂತೆ ಹಲವು ಶೋಗಳ ಮೂಲಕ ಉತ್ತಮ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ತಮ್ಮ ಮುಂದಿನ ನಡೆ ಸಿನಿಮಾ- ರಾಜಕೀಯ ಎಂಟ್ರಿ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ

ramesh aravind 2

ವೀಕೆಂಡ್ ವಿತ್ ರಮೇಶ್ ಶೋ ಮುಗಿದ ಬಳಿಕ ಹೊಸ ಸಿನಿಮಾ ಮಾಡುತ್ತೇನೆ. ಕರೋನಾ ಸಮಯದಲ್ಲಿ ಮೂರು ಕಥೆಗಳನ್ನ ಮಾಡಿಕೊಂಡಿದ್ದೇನೆ. ಅವುಗಳಲ್ಲಿ ಒಂದು ಕಥೆಯನ್ನ ಪ್ರಾರಂಭಿಸುವ ಆಲೋಚನೆಯಿದೆ ಎಂದು ರಮೇಶ್ ಹೇಳಿದ್ದಾರೆ.

ಇದೀಗ ಚುನಾವಣೆ ಕಣ ಜೋರಾಗಿರುವ ಕಾರಣ, ಸ್ಟಾರ್ ನಟ- ನಟಿಯರು ಪಕ್ಷಗಳ ಪರ ಪ್ರಚಾರ ಮಾಡ್ತಿದ್ದಾರೆ. ಹಾಗಾಗಿ ಪಾಲಿಟಿಕ್ಸ್ ಎಂಟ್ರಿ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಪ್ರಚಾರಕ್ಕೆ ಬನ್ನಿ ಅಂತ ಹಲವರು ಕರೆದರು. ಆದರೆ, ಹೋಗಲಿಲ್ಲ. ನಾನು ರಾಜಕೀಯಕ್ಕೆ ತಲೆ ಹಾಕುವುದಿಲ್ಲ. ಬದಲಾಗಿ ತಟಸ್ಥನಾಗಿರಲು ಬಯಸುತ್ತೇನೆ. ಎಲ್ಲರೂ ನನಗೆ ಗೆಳೆಯರೇ, ಎಲ್ಲಾ ಪಕ್ಷದಲ್ಲೂ ಗೆಳೆಯರಿದ್ದಾರೆ. ನನ್ನ ಮಗಳ ಮದುವೆಗೆ ಆ ಪಕ್ಷ, ಈ ಪಕ್ಷ ಅಂತ ನೋಡದೇ ಎಲ್ಲ ಪಕ್ಷದ ನಾಯಕರೂ ಬಂದಿದ್ದರು ಎಂದು ಮಾತನಾಡಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಬರುವ ಆಸಕ್ತಿ ತಮಗಿಲ್ಲ ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.

Share This Article