ಚಿಕ್ಕಮಗಳೂರು: ನಗರಕ್ಕೆ ಹೊಂದಿಕೊಂಡಂತಿರುವ ಬೀಕನಹಳ್ಳಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಯಿಂದ ಕಾಡಾನೆಯನ್ನ ಕಾಡಿಗಟ್ಟಲು ಮುಂದಾಗಿದ್ದಾರೆ. ಈ ಎಲಿಫೆಂಟ್ ಆಪರೇಷನ್‍ಗೆ ಮೈಸೂರಿನ ಅಂಬಾರಿ ಆನೆಗಳಾದ ಭೀಮ ಹಾಗೂ ಅರ್ಜುನ ಆಗಮಿಸಿದ್ದು, ಕಾರ್ಯಚರಣೆ ಆರಂಭಿಸಲಾಗಿದೆ.
Advertisement
ತಾಲೂಕಿನ ಬೀಕನಹಳ್ಳಿ ಕಾಡಂಚಿನ ಗ್ರಾಮದಲ್ಲಿ ಕಾಡು ಹಾಗೂ ಹೊಲ-ಗದ್ದೆ, ತೋಟಗಳು ಹೊಂದಿಕೊಂಡಂತಿವೆ. ಹಾಗಾಗಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮೀತಿ ಮೀರಿತ್ತು. ಅದರಲ್ಲೂ ಕಳೆದ ಎರಡು ತಿಂಗಳಿಂದ ಈ ಭಾಗದ ರೈತರು ಕಣ್ತುಂಬಿ ನಿದ್ದೆ ಮಾಡಿದ್ದೇ ಇಲ್ಲ. ಪಟಾಕಿ ಸಿಡಿಸಿ ಏನೇ ಮಾಡಿದರು ರೈತರು ಮನೆಗೆ ಬರುವಷ್ಟರಲ್ಲಿ ಮತ್ತದೇ ಜಾಗಕ್ಕೆ ಬಂದು ನಿಂತಿರುತ್ತಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ರಾಜ್ಯ ಕಾಂಗ್ರೆಸ್‍ನ ಪವರ್ ಪಾಯಿಂಟ್‍ಗಳಲ್ಲ: ಎಂ.ಬಿ.ಪಾಟೀಲ್
Advertisement
ಹಾಗಾಗಿ, ಆನೆ ಹಾವಳಿಯಿಂದ ಇಲ್ಲಿನ ರೈತರು ಕಂಗಾಲಾಗಿದ್ದರು. ಅಡಿಕೆ-ಬಾಳೆ, ತೆಂಗು, ಮೆಣಸು, ಕಾಫಿ, ಭತ್ತ ಸೇರಿದಂತೆ ಯಾವುದೇ ಬೆಳೆಗಳು ಕೂಡ ರೈತರ ಕೈ ಸೇರಿದ್ದಕ್ಕಿಂತ ಆನೆ ಕಾಲಿಗೆ ಸಿಕ್ಕಿ ಮಣ್ಣಾಗಿದ್ದೇ ಹೆಚ್ಚು. ಹಾಗಾಗಿ, ಈ ಭಾಗದ ರೈತರು ಆನೆ ಹಾವಳಿಯಿಂದ ಹೊಲ-ಗದ್ದೆ, ತೋಟಗಳತ್ತ ಮುಖ ಮಾಡೋದನ್ನೇ ಬಿಟ್ಟಿದ್ದರು.
Advertisement
Advertisement
ಮತ್ತಲವು ಬೆಳೆಗಾರರು ಒಂದು ಪ್ರಯತ್ನ ಮಾಡೋಣ ಎಂದು ತೋಟದಲ್ಲಿ ದೊಡ್ಡ-ದೊಡ್ಡ ಸಿಸ್ಟಮ್ ಇಟ್ಟು ಸದಾ ಕಾಲ ಹಾಡನ್ನು ಹಾಕುತ್ತಿದ್ದರು. ಆದರೂ ಆನೆ ಹಾವಾಳಿ ನಿಂತಿರಲಿಲ್ಲ. ಆದರೆ, ಕಳೆದ ಎರಡು ದಿನಗಳ ಹಿಂದಷ್ಟೆ ತಾಲೂಕಿನ ಆಲ್ದೂರು ಸಮೀಪ ಕಾಫಿತೋಟದಲ್ಲಿ ಮೆಣಸು ಕೊಯ್ಯುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಕಾಡಾನೆ ಆಕೆಯನ್ನ ಕೊಂದು ಮತ್ತೋರ್ವನಿಗೆ ಗಂಭೀರ ಗಾಯಗೊಳಿಸುತ್ತು.
ಬೀಕನಹಳ್ಳಿಯೂ ಕಾಡಂಚಿನ ಗ್ರಾಮ ರೈತರು ಸದಾ ಕಾಲ ಓಡಾಡುತ್ತಿರುತ್ತಾರೆ ಎಂದು ಮನಗಂಡ ಅರಣ್ಯ ಇಲಾಖೆ ನಾಳೆ ಮತ್ತೊಂದು ಅನಾಹುತ ನಡೆದು ಜನರ ಆಕ್ರೋಶಕ್ಕೆ ಇಲಾಖೆ ಕಾರಣವಾಗುವುದು ಬೇಡ ಎಂದು ಆನೆ ಕಾರ್ಯಚರಣೆ ಮುಂದಾಗಿದ್ದಾರೆ. ಎರಡು ಸಾಕಾನೆ ಭೀಮ ಹಾಗೂ ಅರ್ಜುನನ ಜೊತೆ ಮೂರು ತಂಡಗಳಾಗಿರೋ ಅರಣ್ಯ ಇಲಾಖೆಯ 60 ಸಿಬ್ಬಂದಿಗಳು ಒಂಟಿ ಸಲಗವನ್ನ ಕಾಡಿಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಬೇಕು: ರಮಾನಾಥ್ ರೈ ಮನವಿ
ಒಂದೆರಡು ದಿನಗಳ ಕಾರ್ಯಾಚರಣೆಯ ಬಳಿಕ ಬೀಕನಹಳ್ಳಿ ರೈತರಿಗೆ ತಲೆನೋವಾಗಿರೋ ಕಾಡಾನೆಯನ್ನ ಕಾಡಿಗಟ್ಟಲಿದ್ದಾರೆ.