ದಾವಣಗೆರೆ: ಡಿಸೆಂಬರ್ 21 ರಂದು ನಗರದ ಕಾಂಗ್ರೆಸ್‌ನ ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ (SS Mallikarjun) ಒಡೆತನದ ಕಲ್ಲೇಶ್ವರ ಮಿಲ್ ಹಿಂಭಾಗವಿರುವ ಫಾರ್ಮ್ ಹೌಸ್ (Farm House) ಮೇಲೆ ಸಿಸಿಬಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು, ಈ ವೇಳೆ ಅನೇಕ ವನ್ಯಜೀವಿಗಳು (Wildlife) ಪತ್ತೆಯಾಗಿವೆ. ಅವುಗಳನ್ನು ಪರವಾನಿಗೆ ಪಡೆಯದೇ ಸಾಕಣೆ ಮಾಡುತ್ತಿರುವುದು ಕಂಡು ಬಂದಿದ್ದು, ಫಾರ್ಮ್ ಹೌಸ್‌ನಲ್ಲಿರುವ ವನ್ಯಜೀವಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಫಾರ್ಮ್ ಹೌಸ್‌ನ ಮ್ಯಾನೇಜರ್, ಜಾಗದ ಮಾಲೀಕರು ಸೇರಿದಂತೆ 4 ಜನರ ಮೇಲೆ ಈಗಾಗಲೇ ಅರಣ್ಯ ಇಲಾಖೆ ಕೇಸ್ ದಾಖಲಿಸಿಕೊಂಡಿದೆ. ಆರೋಪಿಗಳೆಲ್ಲರೂ ಈಗ ತಲೆಮರೆಸಿಕೊಂಡಿದ್ದಾರೆ.
Advertisement
Advertisement
ಜಾಗದ ಮಾಲೀಕರು ಎನ್ನಲಾದ ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಕೂಡಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವರ ಪರ ಹಿರಿಯ ವಕೀಲ ಪ್ರಕಾಶ್ ಪಾಟೀಲ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡುವಂತೆ ಸರ್ಕಾರಿ ವಕೀಲರಿಗೆ ನ್ಯಾಯಾಲಯ ಅದೇಶ ಮಾಡಿದೆ. ಈ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 2 ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಇದನ್ನೂ ಓದಿ: ಇಂದು ಸಂಜೆಯಿಂದ ನಂದಿಬೆಟ್ಟಕ್ಕೆ ನಿರ್ಬಂಧ- ನ್ಯೂ ಇಯರ್ ಮೋಜು-ಮಸ್ತಿಗೆ ಬ್ರೇಕ್
Advertisement
Advertisement
ಆದರೆ ಇಲ್ಲಿ ಸಾಕಷ್ಟು ಪ್ರಶ್ನೆಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ದಾಖಲಿಸಿಕೊಂಡ ದೂರಿನಲ್ಲಿ ಫಾರ್ಮ್ ಹೌಸ್ ಸಿಬ್ಬಂದಿ ಮ್ಯಾನೇಜರ್ ಹೆಸರುಗಳನ್ನು ತೋರಿಸಿದೆ. ಆದರೆ ಇದರಲ್ಲಿ ಕೇವಲ ಜಾಗದ ಮಾಲೀಕರು ಎಂದು ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರ ಹೆಸರು ತೋರಿಸದೇ ಪ್ರಕರಣ ದಾಖಲಾಗಿದೆ. ಅದರೂ ಕೂಡಾ ಮಲ್ಲಿಕಾರ್ಜುನ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಮಾಜಿ ಸಚಿವರಿಗೆ ಬಂಧನದ ಭೀತಿ ಎದುರಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್‍ಡೌನ್- ರೂಪಾಂತರಿ ಆತಂಕ ಹಿನ್ನೆಲೆ ಸ್ಟ್ರಿಕ್ಟ್ ರೂಲ್ಸ್