ಹಾಸನ: ಹೋಮ್ ಸ್ಟೇಗೆ ಕಾಡುಕೋಣವೊಂದು (Wild Gaur) ನುಗ್ಗಿ ಆತಂಕ ಮೂಡಿಸಿದ ಘಟನೆ ಸಕಲೇಶಪುರದ (Sakleshpura) ದೇವರುಂದ ಗ್ರಾಮದಲ್ಲಿ ನಡೆದಿದೆ.
ದೃಷ್ಟಿ ಕಳೆದುಕೊಂಡ ಕಾಡುಕೋಣ ಕಣ್ಣು ಕಾಣದೇ ಎಲ್ಲಂದರಲ್ಲಿ ಓಡಾಡುತ್ತಿದೆ. ಅಲ್ಲದೇ ಹೋಮ್ ಸ್ಟೇಗೆ ಸಹ ನುಗ್ಗಿ ಆತಂಕ ಮೂಡಿಸಿದೆ. ಹಲವು ದಿನಗಳಿಂದ ಕಣ್ಣು ಕಾಣದೇ ಕಾಡುಕೋಣ ಪರದಾಡುತ್ತಿದೆ.
ದೈತ್ಯಾಕಾರದ ಕಾಡುಕೋಣ ಕಂಡು ಆತಂಕಕ್ಕೆ ಒಳಗಾದ ಸ್ಥಳೀಯರು, ಅದನ್ನು ಸೆರೆ ಹಿಡಿದು ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾರೆ.