ಹಾಸನ: ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನಿಂತ ಒಂಟಿಸಲಗವನ್ನು ಕಂಡು ಟಿವಿಎಸ್ ಮೊಪೆಡ್ (Moped) ನಿಲ್ಲಿಸಿ ಸವಾರೊಬ್ಬರು ಓಡಿ ಹೋಗಿದ್ದಾರೆ. ನಂತರ ಕಾಡಾನೆ (Elephant) ನಿಲ್ಲಿಸಿದ್ದ ಟಿವಿಎಸ್ ಮೊಪೈಡ್‍ಗೆ ಕಾಲಿನಿಂದ ಒದ್ದು ಬೀಳಿಸಿ ಕಾಫಿ ತೋಟದೊಳಗೆ ಓಡಿ ಹೋಗಿರುವ ಘಟನೆ ಹಾಸನ (Hassana) ಜಿಲ್ಲೆ, ಸಕಲೇಶಪುರ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ನಡೆದಿದೆ.
Advertisement
ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಒಂಟಿಸಲಗವೊಂದು ಮೊಪೆಡ್ ಸವಾರೊಬ್ಬರಿಗೆ ಕಾಣಿಸಿಕೊಂಡಿದೆ. ಕಾಡಾನೆ ಬರುವುದನ್ನು ಕಂಡು ಮೊಪೆಡ್ ನಿಲ್ಲಿಸಿ ಅಲ್ಲಿಂದ ಓಡಿದ್ದಾರೆ. ಇತ್ತ ಜನರನ್ನು ಕಂಡ ಕಾಡಾನೆ ಸಿಟ್ಟಿಗೆದ್ದು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಲು ಪ್ರಾರಂಭಿಸಿದೆ. ಈ ವೇಳೆ ರಸ್ತೆಯ ಬದಿಯಲ್ಲಿ ನಿಂತಿದ್ದ ಟಿವಿಎಸ್ ಮೊಪೆಡ್‍ನ್ನು ಹಿಂದಿನ ಕಾಲಿನಿಂದ ಒದ್ದು ಬೀಳಿಸಿ ಕಾಫಿ ತೋಟದೊಳಗೆ ಹೋಗಿದೆ. ಇದನ್ನೂ ಓದಿ: ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!
Advertisement
Advertisement
ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತೀರ ಮಿತಿಮೀರಿದ್ದು, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಿಲ್ಲರ್ ದುರಂತ ಬಳಿಕ ಮತ್ತೊಂದು ಎಡವಟ್ಟು – ಬ್ರಿಗೇಡ್ ರಸ್ತೆಯಲ್ಲಿ 30 ಅಡಿ ಆಳಕ್ಕೆ ಕುಸಿದ ರಸ್ತೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k