ದೊಡ್ಮನೆಯಲ್ಲಿ (Bigg Boss Kannada 11) ಇಂದು (ನ.23) ಕಿಚ್ಚನ ವಾರಾಂತ್ಯದ ಪಂಚಾಯಿತಿ ನಡೆಯಲಿದೆ. ತಪ್ಪು ಮಾಡಿದ ಯಾವೆಲ್ಲ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ವೀಕ್ಷಕರು ಎದುರು ನೋಡುತ್ತಿದ್ದಾರೆ. ಇದರ ನಡುವೆ ನಿನ್ನೆ ರಜತ್ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಆದರೂ ಮನೆಮಂದಿಗೆ ರಜತ್ (Rajath) ಕ್ವಾಟ್ಲೆ ಕೊಡೋದನ್ನು ಅವರು ಬಿಟ್ಟಿಲ್ಲ. ಇದನ್ನೂ ಓದಿ: ರಾಮ್ ಪೋತಿನೇನಿ ಹೊಸ ಚಿತ್ರಕ್ಕೆ ಭಾಗ್ಯಶ್ರೀ ಬೋರ್ಸೆ ನಾಯಕಿ
ಇಂದು (ನ.23) ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ದೊಡ್ಮನೆಯ ಸ್ಪರ್ಧಿಗಳಿಗೆ ರಜತ್ ಚೆನ್ನಾಗಿ ಆಟ ಆಡಿಸಿದ್ದಾರೆ. ಕಳಪೆ ಮತ್ತು ಉತ್ತಮ ವಿಚಾರದಲ್ಲಿ ಬಹುತೇಕ ಸ್ಪರ್ಧಿಗಳು ರಜತ್ ಅವರ ಹೆಸರನ್ನು ತೆಗೆದುಕೊಂಡರು. ರಜತ್ ಬೇಸರದಲ್ಲಿ ಜೈಲಿಗೆ ಹೋಗಿದ್ದಾರೆ. ರಜತ್ ಜೈಲು ವಾಸದಲ್ಲಿದ್ರೂ ಮನೆ ಮಂದಿಗೆ ತಲೆ ನೋವಾಗಿದೆ.
View this post on Instagram
ಜೈಲು ಸೇರಿದ ರಜತ್‌ಗೆ ಶಿಕ್ಷೆಯ ಮುಂದುವರಿದ ಭಾಗವಾಗಿ ಅಡುಗೆಗೆ ಬೇಕಾಗಿದ್ದ ತರಕಾರಿಗಳನ್ನು ಕಟ್ ಮಾಡಿಕೊಡಬೇಕಿತ್ತು. ಭವ್ಯಾ ಗೌಡ (Bhavya Gowda) ಅವರು ಅಡುಗೆಗೆ ಬೇಕಾದ ತರಕಾರಿಗಳನ್ನು ಕಟ್ ಮಾಡುವಂತೆ ರಜತ್‌ಗೆ ನೀಡುತ್ತಾರೆ. ನಾನು ಕಟ್ ಮಾಡುತ್ತೇನೆ, ಆದರೆ ಎರಡು ಗಂಟೆ ಕಾಯಬೇಕು. ಅದು ಕೂಡ ನನಗೆ ಹೆಂಗೆ ಬೇಕೋ ಹಾಗೆ ಕಟ್ ಮಾಡ್ತೇನೆ ಎಂದು ರಜತ್ ತಿರುಗೇಟು ನೀಡಿದ್ದಾರೆ.
ನನಗೆ ಕಳಪೆ ಕೊಡುತ್ತೀರಾ? ಎಲ್ಲರೂ ಕಾಯಿರಿ. ನನಗೆ ಅನಿಸಿದಾಗ ಕಟ್ ಮಾಡಿಕೊಡ್ತೀನಿ. ಏನ್ ಮಾಡ್ತೀರಿ ಇವಾಗ ಏನೂ ಮಾಡೋಕೆ ಆಗಲ್ಲ. ನನಗೂ ಹೊಟ್ಟೆ ಉರಿತಾ ಇಲ್ವಾ ಎಂದು ತಮಾಷೆ ಮಾಡಿದ್ದಾರೆ. ಒಟ್ನಲ್ಲಿ ರಜತ್‌ಗೆ ಚೆಲ್ಲಾಟ ಆಗಿದ್ರೆ, ಮನೆ ಮಂದಿಗೆ ಸಂಕಟ ಆಗ್ತಿರೋದಂತೂ ಗ್ಯಾರಂಟಿ.